ಬಿಎಸ್ ವೈ ಹುಟ್ಟು ಹಬ್ಬ- ಹರಿದು ಬಂದ ಅಭಿನಂದನೆಗಳ ಮಹಾಪೂರ!

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 74 ನೆಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಬೆಂಗಳೂರಿನ ಡಾಲರ್ಸ್ ಕಾಲೋನಿಯ  ಯಡಿಯೂರಪ್ಪ ನಿವಾಸಕ್ಕೆ ಕಾರ್ಯಕರ್ತರು ಮತ್ತು ಅಭಿಮಾನಿಗಳ ಆಗಮಿಸಿ ಹುಟ್ಟುಹಬ್ಬದ ಶುಭಾಷಯವನ್ನು ಕೋರುತ್ತಿದ್ದಾರೆ.

ಬಿಎಸ್ ವೈ ಮನೆ ಮುಂದೆ ಶುಭಾಷಯ ಕೋರುವ ಫ್ಲೇಕ್ಸ್ ಗಳ ರಾರಾಜಿಸುತ್ತಿವೆ. ಯಡಿಯೂರಪ್ಪನವರು ಜನ್ಮ ದಿನದ ಪ್ರಯುಕ್ತ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಕಾರಣದಿಂದಾಗಿ ಶುಭಾಷಯ ಕೋರಲೆಂದು ಬಂದ ಕೆಲವು ಅಭಿಮಾನಿಗಳು ನಿವಾಸದ ಬಳಿ ಕಾದು ಕುಳಿತಿದ್ದಾರೆ.

ಯಡಿಯೂರಪ್ಪ ನಿವಾಸಕ್ಕೆ ಬಂದ ಶಾಸಕರು, ಪಾಲಿಕೆ ಸದಸ್ಯರು, ಮಾಜಿ ಸಚಿವರು ಹಾಗೂ ಪಕ್ಷದ ಮುಖಂಡರು ಆಗಮಿಸಿ ಶುಭ ಕೋರುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಕುಮಾರ ಬಂಗಾರಪ್ಪ ಆಗಮಿಸಿ ಶುಭಾಷಯ ಕೋರಿದ್ದು ವಿಶೇಷವಾಗಿತ್ತು. ಬಳಿಕ ಮಾತನಾಡಿದ ಅವರು ಯಡಿಯೂರಪ್ಪ ಅವರು ನಮ್ಮ ಜಿಲ್ಲೆಯ ಪ್ರಭಾವಿ ನಾಯಕರು. ನಾವು ಬಿಎಸ್ ವೈ ಜತೆಗಿರಬೇಕು ಅಂತಾ ಚಿಂತನೆ ಇದೆ. ಹೀಗಾಗಿ ಬಂದು ಶುಭಾಷಯ ಕೋರಿದ್ದೇನೆ. ಶೀಘ್ರವೇ ಸುದ್ದಿಗೋಷ್ಟಿ ಕರೆದು ತೀರ್ಮಾನವನ್ನು ಅಧಿಕೃತವಾಗಿ ಪ್ರಕಟಿಸುತ್ತೇನೆ ಎಂದು ತಿಳಿಸಿದರು.

ಜನ್ಮ ದಿನದ ಪ್ರಯುಕ್ತ ತಮ್ಮ ನಿವಾಸದಲ್ಲಿ ನೂಕು ನುಗ್ಗಲು ಉಂಟಾಗಿ  ನಿವಾಸದ ಹಾಲ್ ಬಾಗಿಲ ಗಾಜು ಪುಡಿ ಪುಡಿಯಾಗಿದೆ. ಬಳಿಕ ಮಾದ್ಯಮದೊಂದಿಗೆ ಬಿಎಸ್ ವೈ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇರುವುದರಿಂದ ಸರಳ ರೀತಿಯಲ್ಲಿ ಆಚರಿಸಿಕೊಳ್ಳುತ್ತಿದ್ದೇನೆ. ಯಾರೂ ಕೂಡ ಸಂಭ್ರಮದ ಆಚರಣೆ ಮಾಡಬಾರದು ಅಂತಾ ಕೈಮುಗಿದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ. ಈ ರಾಜ್ಯವನ್ನು ಮಾದರಿ ರಾಜ್ಯ ಮಾಡಬೇಕು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅನ್ನೋ ಸಂಕಲ್ಪ ಮಾಡಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಹೋರಾಟ ಇರಲಿದೆ ಎಂದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಬಿಎಸ್ ವೈ ಅವರು ಶ್ರೀಗಳ ಆಶೀರ್ವಾದ ಪಡೆದರು.

Comments are closed.

Social Media Auto Publish Powered By : XYZScripts.com