ಎರಡು ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ ಹೆಬ್ಬುಲಿ ಗಳಿಸಿದ್ದೇಷ್ಟು ?

ಕಿಚ್ಚ ಸುದೀಪ್ ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ ಸಹಜವಾಗಿ ಬಿಗ್ ಓಪನಿಂಗ್ ಇದ್ದೇ ಇರುತ್ತೆ. ಅದರಂತೆ ಇತ್ತೀಚೆಗೆ ತೆರೆಕಂಡ ಹೆಬ್ಬುಲಿ ಕೂಡ ಅದ್ಧೂರಿ ಆರಂಭವನ್ನೇ ಪಡೆದುಕೊಂಡಿದೆ. ಅದರಲ್ಲೂ ಈ ಚಿತ್ರ ಎರಡೇ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿದೆ.

ಈ ಹಿಂದೆ ಚಿತ್ರತಂಡವೇ ಹೇಳಿಕೊಂಡಿರುವಂತೆ ಇದು ಸುಮಾರು 30 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಂಡಿದೆ. ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಪ್ಯಾರಾ ಕಮಾಂಡರ್ ರೋಲ್ ನಲ್ಲಿ ಕಾಣಿಸಿಕೊಂಡಿದ್ರೆ, ಕ್ರೇಜಿ ಸ್ಟಾರ್ ಕಿಚ್ಚನ ಅಣ್ಣನ ಪಾತ್ರ ನಿರ್ವಹಿಸಿದ್ದಾರೆ. ಅಲ್ದೆ ಇದೆ ಮೊದಲ ಬಾರಿಗೆ ಅಮಲಾ ಪೌಲ್ ಕನ್ನಡಕ್ಕೆ ಬಂದಿರುವುದಲ್ಲದೆ, ಸುದೀಪ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಶಿವರಾತ್ರಿಗೂ ಒಂದು ದಿನವಿರುವಾಗ್ಲೇ ಸುಮಾರು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಕೃಷ್ಣ ನಿರ್ದೇಶಿಸಿದ್ದ ಹೆಬ್ಬುಲಿ ಕಳೆದೆರಡು ದಿನಗಳಲ್ಲಿ ಬಾರಿ ಬುಸಿನೆಸ್ ಮಾಡಿದೆ. ಮೊದಲ ದಿನ ಫ್ಯಾನ್ಸ್ ಹಬ್ಬ ಆಗಿದ್ರೆ, ಎರಡನೇ ದಿನ ಶಿವರಾತ್ರಿ ಪ್ರಯುಕ್ತ ರಜೆ ಇದ್ದಿದ್ದರಿಂದ ಫ್ಯಾಮಿಲಿ ಆಡಿಯನ್ಸ್ ನಿಂದ ಥಿಯೇಟರ್ ತುಂಬಿ ತುಳುಕಿತ್ತು. ಹೀಗಾಗಿ ಈ ಎರಡು ದಿನಗಳಲ್ಲಿ ಸಿಂಗಲ್ ಸ್ಕ್ರೀನ್ ಹಾಗು ಮಲ್ಟಿ ಸ್ಕ್ರೀನ್ ಎರಡರಲ್ಲೂ ಸೇರಿ ಬರೋಬ್ಬರಿ 20 ಕೋಟಿ ಗಳಿಕೆ ಕಂಡಿದೆ. ಇದ್ರಲ್ಲಿ ಸುಮಾರು 10 ಕೋಟಿ ನಿರ್ಮಾಪಕರ ಜೇಬು ಸೇರಿದೆ.

Comments are closed.