ಕೇರಳ ಸಿಎಂ ಆಗಮನ- ಮಂಗಳೂರಿನಲ್ಲಿ ಕಟ್ಟೆಚ್ಚರ!

ಕೇರಳ ಸಿಎಂ ಆಗಮನವನ್ನು ವಿರೋಧಿಸಿ ಸಂಘ ಪರಿವಾರದಿಂದ ಹರತಾಳ, ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಕಮೀಷನರ್ ಚಂದ್ರಶೇಖರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್ ವಿರುದ್ದ ಸುಪ್ರೀಂ ಕೋರ್ಟ್ ತೀರ್ಪಿದೆ. ನಮ್ಮ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡಲು ಬದ್ದರಿದ್ದೇವೆ. ಜನರು ವದಂತಿಗಳನ್ನು ನಂಬಬಾರದು ಎಂದು ತಿಳಿಸಿದರು.

ಭದ್ರತೆಗೆ 6 ಎಸ್ ಪಿ, 10 ಡಿಎಸ್ ಪಿ , 20 ಪಿ ಐ ಎಸ್, 2000 ಹೊರ ರಾಜ್ಯದ ಪೊಲೀಸರು. 20 ಕೆಎಸ್ಆರ್ ಪಿ ಪ್ಲಟೂನ್ ಮತ್ತು ಮಂಗಳೂರು ಪೊಲೀಸರು ಭದ್ರತೆಗೆ ನೀಡಲಿದ್ದಾರೆ. 600 ಸಿಸಿ ಕ್ಯಾಮರ, 6 ದ್ರೋಣ್ ಕ್ಯಾಮರ ಭದ್ರತೆಗೆ ನಿಯೋಜಿಸಲಾಗಿದೆ. ಸಿಪಿಎಂನವರ ಕಾರ್ಯಕ್ರಮಕ್ಕೂ ಕೆಲವು ನಿಬಂಧನೆ ಹೇರಲಾಗಿದೆ. ನಿಬಂಧನೆ ಮೀರದಂತೆ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ.  ಬಸ್ ಸಂಚಾರಕ್ಕೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳು, ಮೀಡಿಯಾ ಅಪಪ್ರಚಾರ ಮತ್ತು ಸುಳ್ಳು ಸುದ್ದಿ ಫಾರ್ವರ್ಡ್ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಆಗುವ ನಷ್ಟ ಅವರಿಂದಲೆ ಭರಿಸಲಾಗುವುದು ಎಂದು ತಿಳಿಸಿದರು.

One thought on “ಕೇರಳ ಸಿಎಂ ಆಗಮನ- ಮಂಗಳೂರಿನಲ್ಲಿ ಕಟ್ಟೆಚ್ಚರ!

 • October 24, 2017 at 2:46 PM
  Permalink

  Hey there would you mind letting me know which hosting company
  you’re using? I’ve loaded your blog in 3 different browsers
  and I must say this blog loads a lot faster then most.

  Can you suggest a good internet hosting provider at
  a fair price? Thanks a lot, I appreciate it!

Comments are closed.

Social Media Auto Publish Powered By : XYZScripts.com