ಡೈರಿ ಬಹಿರಂಗದ ಹಿಂದೆ ಅಮಿತ್ ಷಾ ಕೈವಾಡ- ಕೈ ಆರೋಪ…

ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗೋವಿಂದರಾಜು ಅವರ ಡೈರಿಯಲ್ಲಿರುವ ಅಂಶಗಳನ್ನು ಖಾಸಗಿ ಸುದ್ದಿವಾಹಿನಿಯೊಂದು ಬಿತ್ತರಿಸಿದೆ.

ಕಳೆದೊಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಠಿಸಿದ್ದ ಡೈರಿ ವಿಚಾರ ಇದೀಗ ಬಹಿರಂಗಗೊಂಡಿದೆ. ಡೈರಿಯಲ್ಲಿ ಹಲವು ಪ್ರಮುಖ ಸಚಿವರುಗಳು ಮತ್ತು ಇನ್ನೂ ಕೆಲವರ ಹೆಸರುಗಳು ನಮೂದಾಗಿರುವುದು ಕಂಡುಬಂದಿದೆ. ಡೈರಿ ವಿಷಯ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಆತಂಕ ಮನೆಮಾಡಿದೆ.

ಕಳೆದ ವಾರಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಒಂದು ಸಾವಿರ ಕೋಟಿ ಹಣ ನೀಡಿರುವುದು ಅವರ ಆಪ್ತ ಗೋವಿಂದರಾಜು ಡೈರಿಯಲ್ಲಿ ನಮೂದಾಗಿದೆ ಎಂದಿದ್ದರು. ಆ ನಂತರ ರಾಜ್ಯ ರಾಜಕೀಯದಲ್ಲಿ ಬಿರುಸಿನ ವಾದ ವಿವಾದಗಳು ನಡೆದವು. ಆ ನಂತರ ಡೈರಿಯಲ್ಲಿರುವ ವಿಚಾರವನ್ನು ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದರು. ಅವರು ಬಿಡುಗಡೆ ಮಾಡುವ ಮೊದಲೇ ಖಾಸಗಿ ಸುದ್ದಿವಾಹಿನಿಯೊಂದು ಡೈರಿಯಲ್ಲಿರುವ ವಿವರಗಳನ್ನು ಬಹಿರಂಗ ಪಡಿಸಿದೆ.

ಡೈರಿಯಲ್ಲಿ ಇನ್ ಷಿಯಲ್ ಗಳು ಮಾತ್ರ ಇದ್ದು ಹೆಸರುಗಳನ್ನು ಬರೆದಿಲ್ಲ. ಅಲ್ಲದೆ ಇದೊಂದು ನಕಲಿ ಡೈರಿ ಇದರಲ್ಲಿ ಸತ್ಯ ಇಲ್ಲ. ಇದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಯಡಿಯೂರಪ್ಪನವರ ಡಿ-ನೋಟಿಫಿಕೇಷನ್ ಹಗರಣದ  ಮಾಹಿತಿಯು ವಾಹಿನಿಗಳಿಗೆ ಸೋರಿಕೆಯಾಗಿತ್ತು. ಆ ಸಂದರ್ಭದಲ್ಲಿ ಸಂತೋಷ್ ಹೆಗ್ಡೆಯವರು ಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಮಾಹಿತಿಯ ಸೋರಿಕೆ ಆರೋಪವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಎಲ್.ಕೆ.ಅಡ್ವಾಣಿ ಮೇಲೆ ಕೇಳಿಬಂದಿದ್ದನ್ನು ಸ್ಮರಿಸಬಹುದು.

One thought on “ಡೈರಿ ಬಹಿರಂಗದ ಹಿಂದೆ ಅಮಿತ್ ಷಾ ಕೈವಾಡ- ಕೈ ಆರೋಪ…

Comments are closed.

Social Media Auto Publish Powered By : XYZScripts.com