ಶಿವರಾತ್ರಿ ಮುಗಿದ ಮೇಲೆ ಉಪವಾಸ ಕೂರುತ್ತೇನೆ!
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಹಾ ಮಸ್ತಕಾಭಿಷೇಕಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಮಸ್ತಕಾಭಿಷೇಕಕ್ಕೆ ಪ್ರಧಾನಿಗೆ ಆಹ್ವಾನ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾ ಮಸ್ತಕಾಭಿಷೇಕಕ್ಕೆ ಹಣ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೇನೆ. ಅಲ್ಲದೆ ತೆಂಗು ಬೆಂಬಲ ಬೆಲೆ ನೀಡುವ ಬಗ್ಗೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.
ಯಗಚಿ ಕುಡಿಯುವ ನೀರಿನ ಗೊಂದಲ ವಿಚಾರ ಅಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದಾರೆ. ಹಾಸನದ ಹತ್ತು ವಾರ್ಡ್ ಗಳಿಗೆ ನೀರಿಲ್ಲ. ನಾಳೆ ಶಿವರಾತ್ರಿ ಹಬ್ಬವಿದೆ ಸ್ನಾನ ಮಾಡಲು ನೀರಿಲ್ಲ ಎಂದು ಜನರು ಗೋಗರೆಯುತ್ತಿದ್ದಾರೆ. ಕುಡಿಯುವ ನೀರಿಗೆ ತೊಂದರೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿಸಿದರು.
ನಾನು ಮತ್ತೊಮ್ಮೆ ಉಪವಾಸ ಕೂರಬೇಕೇನು.?
ಈ ವಯಸ್ಸಲ್ಲಿ ಉಪವಾಸ ಕೂರಲು ನನಗೆ ಆಗಲ್ಲ. ಸಿದ್ದರಾಮಯ್ಯ ಬಿರುಸಿನಿಂದ ಮಾತನಾಡುತ್ತಾರೆ. ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಶಿವರಾತ್ರಿ ಮುಗಿದ ಕುಡಿಯುವ ನೀರಿಗಾಗಿ ನಾಡಿದ್ದು ಧರಣಿ ಆಭಿಸುತ್ತೇನೆ ಎಂದು ತಿಳಿಸಿದರು.
Comments are closed.