ಯಡಿಯೂರಪ್ಪನವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಇದೆ.

ಬಿಜೆಪಿ ಪ್ರತಿಭಟನೆಯಲ್ಲಿ ಯಡಿಯೂರಪ್ಪ ಆವೇಶಭರಿತರಾಗಿ ಮಾತಾಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಯಡಿಯೂರಪ್ಪನವರಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾವೆಯಿಲ್ಲದ, ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ಬಾಯಿಗೆ ಬಂದಂತೆ ಬಿಜೆಪಿ ಮುಖಂಡರು ಮಾತಾಡಿದ್ದಾರೆ. ಬಸ್ ಸ್ಟ್ಯಾಂಡ್ ನಲ್ಲಿ ನಿಂತುಕೊಂಡು ಮಾತಾಡಿದಂತೆ ಪ್ರತಿಭಟನೆ ಮಾಡಿದ್ದಾರೆ. ನಿಜಕ್ಕೂ ಯಡಿಯೂರಪ್ಪ ಗೆ ಮಾನಸಿಕ ಚಿಕಿತ್ಸೆ ಅಗತ್ಯವೆ ಎಂದು ತಿಳಿಸಿದರು.

24 ಗಂಟೆಯಲ್ಲಿ ಸಿಎಂ ಸಿದ್ದರಾಮಯ್ಯ ರನ್ನು ಜೈಲಿಗೆ ಕಳುಹಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಯಡಿಯೂರಪ್ಪರೇನು ನ್ಯಾಯಾಧೀಶರಾ?. ಬೇಕಾದವರನ್ನು ಜೈಲಿಗೆ ಹಾಕಲು ಬಿಎಸ್ವೈ ಉಗಾಂಡದ ಸರ್ವಾಧಿಕಾರಿಯಾ?, ಕೇಂದ್ರ ಸರ್ಕಾರದ ಇಲಾಖೆಗಳನ್ನು ಬಳಸಿ ಸಿಎಂ ಅನ್ನು ಜೈಲಿಗೆ ಹಾಕಲಿ, ಸಿಎಂ ಆಗುವವರೆಗೆ ಕಾಯೋದ್ಯಾಕೆ? ಎಂದು ಛೇಡಿಸಿದರು.

ಯಡಿಯೂರಪ್ಪರನ್ನು ಬಿಜೆಪಿ ಗುಂಪು ಬಲಿಪಶು ಮಾಡುತ್ತಿದೆ. ಈ ತರಹ ಹೇಳಿಕೆಗಳನ್ನು ಉದ್ದೇಶ ಪೂರ್ವಕ ಮಾಡಿಸಲಾಗುತ್ತಿದೆ. ಬಿಎಸ್ ವೈ ವರ್ಚಸ್ಸು ಕುಗ್ಗಿಸಲು ಬಿಜೆಪಿ ಗುಂಪಿನಿಂದ ಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಯಡಿಯೂರಪ್ಪನವರ ಹತ್ತಿರ ಅಧಿಕಾರದ ಶಕ್ತಿ ಇದೆ. ನಮ್ಮ ವಿರುದ್ದ ದಾಖಲೆ ಇದ್ದರೆ ಈಗಲೇ ಜೈಲಿಗೆ ಹಾಕಲಿ. ಯಡಿಯೂರಪ್ಪ ಹುಚ್ಚರ ತರಹ ಮಾತಾಡ್ತಾ ತಿರುಗಬಾರದು. ಜೈಲಿಗೆ ಹೋಗಿ ಬಂದವರು ನಮಗೇ ಜೈಲಿನ ಬೆದರಿಕೆ ಒಡ್ಡುತ್ತಿದ್ದಾರೆ. ಭ್ರಷ್ಠಾಚಾರದಲ್ಲಿ ಹಿಮಾಲಯ ಶಿಖರ ಏರಿದವರು ಬಿಎಸ್ ವೈ ಎಂದರು.

ಐಟಿ ಹಾಗು ಇಡಿ ಇಲಾಖೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ರೇಡ್ ಹಾಗೂ ಡೈರಿಯ ಬಗ್ಗೆ ಸಿಬಿಐ ತನಿಖೆ ಮಾಡಲಿ. ಬಿಜೆಪಿ ಆದಾಯ ಇಲಾಖೆಯನ್ನು ಬಿಜೆಪಿ ನಾಯಕರು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಆದಾಯ ಇಲಾಖೆಯ ಮಾಹಿತಿ ಸೋರಿಕೆಯಾಗುತ್ತಿದೆ. ಐಟಿ ಅಧಿಕಾರಿಗಳು ತನಿಖೆಯ ದಾಖಲೆಗಳನ್ನು ಸೋರಿಕೆ ಮಾಡಿದ್ದಾರೆ. ಐಟಿ ದಾಖಲೆ ಸೋರಿಕೆ ಬಗ್ಗೆ ನಮ್ಮಲ್ಲಿ ಆಧಾರ ಇದೆ ಎಂದು ಆರೋಪಿಸಿದರು.

Comments are closed.

Social Media Auto Publish Powered By : XYZScripts.com