ಐಪಿಎಲ್ ಹರಾಜು- ಆಕರ್ಷಿಸಿದ ಯಂಗ್ ಸ್ಟಾರ್ಸ್, ಅನುಭವಿಗಳಿಗಿಲ್ಲ ಮಣೆ!

ನಿರೀಕ್ಷೆಯಂತೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಕೋಟಿ ಬಾಚಿಕೊಂಡರೆ, ಅನುಭವಿ ಆಟಗಾರ ಮಾಲೀಕರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದು, ಯುವಕರು ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಎಲ್ಲರ ಗಮನ ಸೆಳೆದರು. ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಬೌಲರ್‌ಗಳು ಆಕರ್ಷಿಸಿದಿರು.

ಯುವ ಆಟಗಾರರನ್ನು ತಮ್ಮ ತಂಡಕ್ಕೆ ಸೆಳೆಯಲು ಎಲ್ಲ ಮಾಲೀಕರು ಮುಗಿ ಬಿದ್ದರು. ಬೆನ್ ಸ್ಟೋಕ್ಸ್ (14.50), ಟೈಮಲ್ ಮಿಲ್ಸ್ (12), ಕಗಿಸೋ ರಬಾಡ (5), ರಶೀದ್ ಖಾನ್ (4), ಟ್ರೆಂಟ್ ಬೋಲ್ಟ್ (5), ಕಮಿನ್ಸ್ (4.50), ಟಿ.ನಟರಾಜನ್ (3), ಮೊಹಮ್ಮದ್ ಸಿರಾಜ್ (2.60), ಮಿಚೆಲ್ ಜಾನ್ಸನ್ (2), ಇಯಾನ್ ಮಾರ್ಗನ್ (2), ವರುಣ್ ಏರಾನ್ (2.80), ಕ್ರಿಸ್ ವೋಕ್ಸ್ (4.20), ಕಲ್ಟರ್ ನೈಲ್ (3.5), ಮೂಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಹಲವರು ಬಿಕರಿಯಾದರು.

ಇಶಾಂತ್‌ಗೆ ಕೋಕ್: ಇನ್ನು ಭಾರತ ತಂಡದ ಆಟಗಾರ ಇಶಾಂತ್ ಶರ್ಮಾ, ಅನುಭವಿ ಪ್ರಜ್ಞಾನ್ ಓಜಾ, ಪರ್ವೆಜ್ ರಸೊಲ್, ವೇಗಿ ಆರ್.ಪಿ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಹಿಂದೇಟು ಹಾಕಿದರು.

ಸಿರಾಜ್ ಸೆಳೆಯುವಲ್ಲಿ ಆರ್‌ಸಿಬಿ ವಿಫಲ: ಹಿಮಾಚಲ್ ಪ್ರದೇಶದ ಆಟಗಾರ ಮೊಹಮ್ಮದ್ ಸಿರಾಜ್ ಅವರನ್ನು ಸೆಳೆಯುವಲ್ಲಿ ಆರ್‌ಸಿಬಿ ವಿಫಲವಾಗಿದೆ. ಸಿರಾಜ್ ಅವರ ಮೂಲ ಬೆಲೆ 20 ಲಕ್ಷ. ಇವರ ಆಟದ ಲಾಭ ಪಡೆಯಲು ಆರ್‌ಸಿಬಿ ಹಣವನ್ನು ಬಿಡ್ ಮಾಡುತ್ತಾ ಸಾಗಿತು. ಹೈದರಾಬಾದ್ ತಂಡ, ಆರ್‌ಸಿಬಿಗೆ ಸವಾಲು ಹಾಕುತ್ತಾ ಸಾಗೀತು. ಸುಮಾರು 2.40 ಕೋಟಿವರೆಗೂ ಬಿಡ್ ಮಾಡಿದ ಆರ್‌ಸಿಬಿ ಮುಂದೆವರೆಯಲು ಆಗಲಿಲ್ಲ. ಕಾರಣ ಆರ್‌ಸಿಬಿ ಖಾತೆಯಲ್ಲಿ ಮುಂದೆ ಹರಾಜು ಮಾಡಲು ಬೇಕಾದ ಹಣವಿರಲಿಲ್ಲ. ಹೀಗಾಗಿ ಇದರ ಲಾಭ ಪಡೆದ ಹೈದರಾಬಾದ್ 2.60 ಕೋಟಿ ರೂ. ನೀಡಿದೆ. ಹರಾಜಿನಲ್ಲಿ ಸುಮಾರು 23 ಬೌಲರ್‌ಗಳು ಬಿಕರಿಯಾಗಿದ್ದಾರೆ. ಉಳಿದಂತೆ 15 ಆಲ್‌ರೌಂಡರ್, 5 ವಿಕೆಟ್ ಕೀಪರ್, 10 ಬ್ಯಾಟ್ಸ್‌ ಮನ್‌ಗಳು ಎಂಟು ತಂಡದಲ್ಲಿ ಹಂಚಿ ಹೊಂಗಿದ್ದಾರೆ.

ಮೀಲ್ಸ್ ಬಡಿಸಿದ ಆರ್‌ಸಿಬಿ : ಟೈಮಲ್ ಮಿಲ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮೊದಲು ಮುಂಬೈ, ಪಂಜಾಬ್ ಫೈಟ್ ನಡೆಸಿದವು. 50 ಲಕ್ಷ ಮೂಲಬೆಲೆಯ ಆಟಗಾರರನ್ನು ಪಡೆಯಲು ಉಭಯ ತಂಡಗಳು 7.20 ಕೋಟಿ ವರೆಗೂ ಪ್ರಯತ್ನ ನಡೆಸದವು. ಅಲ್ಲದೆ ಈ ರೇಸ್‌ನಿಂದ ಪಂಜಾಬ್ ಹಿಂದೆ ಸರೆಯಿತು. ಅಲ್ಲಿಯವರೆಗೂ ಸುಮ್ಮನೆ ಕುಳಿತಿದ್ದ ಆರ್‌ಸಿಬಿ 7.20 ಕೋಟಿ ಬಿಡ್ ಮಾಡಿತು. ಮುಂಬೈ ಸಹ ಮಿಲ್ಸ್ ಪಡೆಯುವ ಪ್ರಯತ್ನ ಕೈ ಬಿಟ್ಟಿತು. ಕೋಲ್ಕತಾ ಅಂಗಳ ಪ್ರವೇಶಿಸಿ ಆರ್‌ಸಿಬಿ ಫೈಟ್ ನೀಡಿತು. ಆರ್‌ಸಿಬಿ 12 ಕೋಟಿ ನೀಡಿ ಮಿಲ್ಸ್ ಅವರನ್ನು ತೆಕ್ಕೆಗೆ ಹಾಕಿಕೊಂಡಿತು.

3 thoughts on “ಐಪಿಎಲ್ ಹರಾಜು- ಆಕರ್ಷಿಸಿದ ಯಂಗ್ ಸ್ಟಾರ್ಸ್, ಅನುಭವಿಗಳಿಗಿಲ್ಲ ಮಣೆ!

Comments are closed.

Social Media Auto Publish Powered By : XYZScripts.com