ಇಂದು ನಡೆಯಲಿದೆ 357 ಕ್ರಿಕೆಟಿಗರ ಅದೃಷ್ಟ ಪರೀಕ್ಷೆ!

ದೇಶಿಯ ಆಟಗಾರರನ್ನು ತಂಡ ಸೇರಿಸಿಕೊಳ್ಳಲು ಬೇಕಾದ ರೂಪುರೇಷೆಗಳನ್ನು ಎಂಟು ಮಾಲೀಕರು ಮಾಡಿಕೊಂಡಿದ್ದು, ಸೋಮವಾರ ನಗರದಲ್ಲಿ ಹತ್ತನೇ ಆವೃತ್ತಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 350೦ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿದ್ದು, ಸ್ಟಾರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಯೋಜನೆಯನ್ನು ರೂಪಿಸಿಕೊಂಡಿದ್ದಾರೆ.

ಹರಾಜಾಗುವ ಆಟಗಾರರ ಮೊತ್ತ 2 ಕೋಟಿಯಿಂದ 10 ಲಕ್ಷ ರೂ.ಗಳವರೆಗೆ ಇದ್ದು, ಇತ್ತೀಚಿಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ದೇಶಿಯ ಆಟಗಾರರನ್ನು ಖರೀಧಿಸಲು ತೀವ್ರ ಪೈಪೋಟಿ ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು.

ಇದು ಐಪಿಎಲ್‌ನ 10ನೇ ಆವೃತ್ತಿಯಾಗಿದ್ದು,  ಮುಂದಿನ ವರ್ಷ ಎಲ್ಲ ಆಟಗಾರರು ಮತ್ತೆ ಹರಾಜಿನಲ್ಲಿ ಭಾಗವಹಿಲಿದ್ದಾರೆ. ಭಾರತದ ವೇಗಿ ಇಶಾಂತ್ ಶರ್ಮಾ 2 ಕೋಟಿ ಮೂಲಬೆಲೆಯನ್ನು ಹೊಂದಿರುವ ಆಟಗಾರ. ಇವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಯಬಹುದು. ಉಳಿದಂತೆ ಭಾರತ ಆಲ್‌ರೌಂಡರ್ ಇರ್ಫಾನ್ ಫಠಾಣ್ 50 ಲಕ್ಷ ಹಾಗೂ ವರೂಣ್ ಏರಾನ್ 30 ಲಕ್ಷ ಮೂಲಬೆಲೆಯನ್ನು ಹೊಂದಿದ್ದು, ಇವರಿಗೂ ಹರಾಜಿನಲ್ಲಿ ಪ್ರಾಮುಖ್ಯತೆ ಬರಬಹುದು.  ಜಾರ್ಖಂಡ್ ತಂಡದ ವಿರಾಟ್ ಸಿಂಗ್ ಹಾಗೂ ಮುಂಬೈ ತಂಡದ ಯುವ ಬ್ಯಾಟ್ಸ್‌ ಮನ್ ಪೃಥ್ವಿ ಶಾ 10 ಲಕ್ಷ ಮೂಲ ಬೆಲೆ ಹೊಂದಿದ್ದು, ಇವರನ್ನು ಸೆಳೆಯಲು ಫೈಟ್ ನಡೆಯುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ರಣಜಿ, ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಕಸರತ್ತು ನಡೆಸಲಿದ್ದಾರೆ.

ಇತ್ತೀಚಿಗೆ ಭಾರತ ಪ್ರವಾಸವನ್ನು ಮುಗಿಸಿರುವ ಇಂಗ್ಲೆಂಡ್ ತಂಡದ ಆಟಗಾರರ ಮೇಲೂ ಮಾಲೀಕರ ಕಣ್ಣು ನೆಟ್ಟಿದ್ದಾರೆ. ಇಂಗ್ಲೆಂಡ್ ಆಟಗಾರರು ಏಪ್ರಿಲ್ ತಿಂಗಳು ಮಾತ್ರ ಲಭ್ಯರಿರುತ್ತಾರೆ. ಬೆನ್ ಸ್ಟೋಕ್ಸ್, ಇಯಾನ್ ಮಾರ್ಗನ್, ಜಾಸನ್ ರಾಯ್ ಉತ್ತಮವಾಗಿ ಭಾರತದಲ್ಲಿ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ವೆಸ್ಟ್ ಇಂಡೀಸ್ ವಿರುದ್ಧ ಮೇ ನಲ್ಲಿ ಎರಡು ಏಕದಿನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳನ್ನು ಆಡಲಿದೆ. ಇದನ್ನೆಲ್ಲಾ ಲೆಕ್ಕಾಚಾರ ಹಾಕಿ ಮಾಲೀಕರು ಆಟಗಾರರ ಮೇಲೆ ಹಣ ಹೂಡಲಿದ್ದಾರೆ. ಇಂಗ್ಲೆಂಡ್ ತಂಡದ ಆಟಗಾರರ ಮೇಲೆ ಹಣ ಹೂಡುವ ಮುನ್ನ ಮಾಲೀಕರು ಎರಡು ಬಾರಿ ಯೋಚಿಸಿಯೇ ಮುಂದಿನ ಹೆಜ್ಜೆ ಇಡಲಿದ್ದಾರೆ. ಸ್ಟೋಕ್ಸ್ ಆಲ್‌ರೌಂಡರ್ ರೂಪದಲ್ಲಿ ತಂಡ ಸೇರಿದಲ್ಲಿ  ಸುಮಾರು 8 ರಿಂದ 10 ಪಂದ್ಯಗಳನ್ನು ಆಡಬಲ್ಲರು.

ವೆಸ್ಟ್ ಇಂಡೀಸ್ ತಂಡದ ಏವಿನ್ ಲೂಯಿಸ್ ಹಾಗೂ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ್ ಅವರ ಕೋಟಿ ಕೋಟಿ ಬಾಚುವ ಸಾಧ್ಯತೆ ಇದೆ.

ಇಬ್ಬರು ಅಫ್ಘಾನ್ ಆಟಗಾರರು

ಈ ಬಾರಿ ಐಪಿಎಲ್ ಹರಾಜಿನಲ್ಲಿ ಇಬ್ಬರು ಅಫ್ಘಾನಿಸ್ತಾನ ಆಟಗಾರರು ಇದ್ದಾರೆ. ಮೊಹಮ್ಮದ್ ಶೆಹಜಾದೆ ಹಾಗೂ ಮೊಹಮ್ಮದ್ ನಬಿ. ಇಬ್ಬರು ಕ್ರಮವಾಗಿ 50 ಹಾಗೂ 30 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದಾರೆ.

 

ಆಕರ್ಷಣೆಯ ಆಟಗಾರರು: ಭಾರತದ ಇಶಾಂತ್ ಶರ್ಮಾ, ಬೆನ್ ಸ್ಟೋಕ್ಸ್, ಇಯಾನ್ ಮಾರ್ಗನ್, ಕ್ರಿಸ್ ವೋಕ್ಸ್, ಮಿಚೆಲ್ ಜಾನ್ಸನ್, ಪ್ಯಾಟ್ ಕಮಿನ್ಸ್, ಆಂಜಿಲೋ ಮ್ಯಾಥ್ಯೂಸ್, ಮೊಹಮ್ಮದ್ ನಬಿ, ಮೊಹಮ್ಮದ್ ಶಹಜಾದ್, ರಶೀದ್ ಖಾನ್, ದವಲತ್ ಜರದಾನ್, ಚಿರಾಗ್ ಸೂರಿ.

ಫ್ರಾಂಚೈಸಿ ಬಳಿ ಇರುವ ಹಣ:  ತಂಡ, ಉಳಿದ ಹಣ (ಕೋಟಿ ರೂ.ಗಳಲ್ಲಿ), ಏಷ್ಟು ಆಟಗಾರರ ಪಡೆಯಬಹುದು

ಪಂಜಾಬ್, 23.35 – 8

ಡೆಲ್ಲಿ, 23.1- 10

ಮುಂಬೈ, 11.555- 14

ಬೆಂಗಳೂರು, 12.825-7

ಗುಜರಾತ್. 14.35- 11

ಪುಣೆ, 17.5- 10

ಹೈದರಾಬಾದ್, 20.90- 10

ಕೋಲ್ಕೊತ, 19.75- 14

Comments are closed.