ಇಮ್ರಾನ್ ಮಾರಕ ದಾಳಿಗೆ ಕಂಗಾಲಾದ ನ್ಯೂಜಿಲೆಂಡ್!

ಭರವಸೆಯ ಸ್ಪಿನ್ ಬೌಲರ್ ಇಮ್ರಾನ್ ತಾಹೀರ್ ಅವರ ಮಾರಕ ದಾಳಿಗೆ ನ್ಯೂಜಿಲೆಂಡ್ ತಬ್ಬಿಬ್ಬಾಗಿದೆ. ಏಕೈಕ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 78 ರನ್ ಜಯ ಸಾಧಿಸಿದ್ದು, ಸರಣಿ ಗೆದ್ದಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕಿವೀಸ್ 14.5 ಓವರ್‌ಗಳಲ್ಲಿ 107 ರನ್‌ಗಳಿಗೆ ಸರ್ವ ಪತನ ಹೊಂದಿತು. ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ (13), ಟಾಮ್ ಬ್ರುಸ್ (33), ಟೀಮ್ ಸೌಥಿ (20), ಹಾಗೂ ಗ್ರ್ಯಾಂಡ್ ಹೋಮ್ (15) ಅವರನ್ನು ಹೊರತು ಪಡಿಸಿದರೆ ಬೇರ‍್ಯಾವ ಬ್ಯಾಟ್ಸ್‌ಮನ್ ಎರಡಂಕಿ ಮುಟ್ಟಲಿಲ್ಲ.

ಆಫ್ರಿಕಾ ಪರ ಸ್ಪಿನ್ ಬೌಲರ್ ತಾಹೀರ್ 3.5 ಓವರ್‌ಗಳಲ್ಲಿ 24 ರನ್ ನೀಡಿ 5 ವಿಕೆಟ್ ಕಬಳಿಸಿದರು. ಕ್ರಿಸ್ ಮೊರಿಸ್ ಎರಡು ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟ್ ಆಫ್ರಿಕಾ ಪರ ಹಾಶೀಮ್ ಆಮ್ಲಾ 43 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿದರು. ಉಳಿದಂತೆ ನಾಯಕ ಫಾಫ್ ಡುಪ್ಲೆಸಿಸ್ (36), ಎಬಿಡಿ ವಿಲಿಯರ್ಸ್ (26), ಜಿನ್ ಪಾಲ್ ಡುಮಿನಿ (29) ತಂಡದ ಮೊತ್ತವನ್ನು ಹಿಗ್ಗಿಸಿದರು.ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್, ಗ್ರ್ಯಾಂಡ್‌ಹೋಮ್ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೊರ್

ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185.

ನ್ಯೂಜಿಲೆಂಡ್ 14.5 ಓವರ್‌ಗಳಲ್ಲಿ 107.

4 thoughts on “ಇಮ್ರಾನ್ ಮಾರಕ ದಾಳಿಗೆ ಕಂಗಾಲಾದ ನ್ಯೂಜಿಲೆಂಡ್!

 • October 18, 2017 at 2:58 PM
  Permalink

  I do agree with all of the concepts you have presented to your post. They’re very convincing and can certainly work. Nonetheless, the posts are very quick for starters. May just you please lengthen them a little from subsequent time? Thank you for the post.

 • October 24, 2017 at 3:34 PM
  Permalink

  I think other site proprietors should take this site as an model, very clean and magnificent user friendly style and design, let alone the content. You are an expert in this topic!

 • October 24, 2017 at 3:49 PM
  Permalink

  I’ve read a few good stuff here. Definitely worth bookmarking for revisiting. I surprise how much effort you put to create this type of fantastic informative web site.

Comments are closed.

Social Media Auto Publish Powered By : XYZScripts.com