ನಾಗ್ ಮುಂದೆ ರಟ್ಟಾಯ್ತು ಚಿರು 151ನೇ ಸಿನಿಮಾ ಗುಟ್ಟು!

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಚಿತ್ರಕ್ಕೆ ನಿರ್ದೇಶಕರು ಯಾರು ಅನ್ನೊ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶಂಕರ್ ದಾದಾ ಜಿಂದಾಬಾದ್ ನಂತ್ರ 10 ವರ್ಷಗಳ ಕಾಲ ಚಿತ್ರರಂಗದಿಂದ ದೂರಾಗಿದ್ದ ಚಿರು, ಖೈದಿ ನಂ.150 ಚಿತ್ರದಿಂದ ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ ಮಾಸ್ ಮಸಾಲ ಎಂಟಟ್ರೇನರ್ ಖೈದಿ ನಂ.150 ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಖೈದಿಯಾಗಿ ಚಿರು ಓವರಾಲ್ ಪರ್ಫಾರ್ಮನ್ಸ್ ನೋಡಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. 

ಖೈದಿ ನಂ. 150 ನಂತ್ರ ಚಿರು ತಮ್ಮ 151ನೇ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಈ ಸಿನಿಮಾವನ್ನು ಕೂಡ ಚಿರು ಪುತ್ರ ರಾಮ್ ಚರಣ್ ತೇಜಾ ನಿರ್ಮಿಸಲಿದ್ದಾರೆ. ಆದ್ರೆ ಆ ಸ್ಪೆಷಲ್ ಚಿತ್ರವನ್ನ ಯಾರು ನಿರ್ದೇಶಿಸ್ತಾರೆ ಅನ್ನೋದು ಫೈನಲ್ ಆಗಿರಲಿಲ್ಲ. ಈಗಾಗಲೇ ಸಾಕಷ್ಟು ನಿರ್ದೇಶಕರು ಚಿರಂಜೀವಿಗೆ ಕಥೆ ಹೇಳಿದ್ದಾರಂತೆ. ಆದರೆ ಈವರೆಗೆ ಚಿರು 151ನೇ ಚಿತ್ರಕ್ಕೆ ಯಾವ ಕಥೆ ಓಕೆ ಆಗಿದೆ. ಆ ಚಿತ್ರವನ್ನ ಯಾರು ಡೈರೆಕ್ಟ್ ಮಾಡ್ತಾರೆ ಅನ್ನೋದು ಮಾತ್ರ ಕನ್ಫರ್ಮ್ ಆಗಿರಲಿಲ್ಲ. ಇತ್ತೀಚೆಗೆ ಚೆರ್ರಿ ನಟನೆಯ ಧ್ರುವ ಚಿತ್ರ ಮಾಡಿದ್ದ ಸುರೇಂದರ್ ರೆಡ್ಡಿ ಆ ಜವಾಬ್ದಾರಿ ನಿಭಾಯಿಸ್ತಾರೆ ಅನ್ನೋ ಗುಸು ಗುಸು ಕೇಳಿ ಬರ್ತಿತ್ತು. ಇದೀಗ ನಾಗಾರ್ಜುನ, ಖುದ್ದು ಚಿರಂಜೀವಿಯವರಿಂದ ಈ ವಿಚಾರವನ್ನ ಬಾಯ್ಬಿಡಿಸಿದ್ದಾರೆ.

ಮೀಲೊ ಎವರು ಕೋಟಿಶ್ವರುಡು ಕಿರುತೆರೆ ಕಾರ್ಯಕ್ರಮದಲ್ಲಿ ನಾಗಾರ್ಜುನ ಜೊತೆ ಮಾತನಾಡುತ್ತ ತಮ್ಮ 151ನೇ ಸಿನಿಮಾ ಬಗ್ಗೆ ತುಟಿ ಬಿಚ್ಚಿದ್ದಾರೆ ಚಿರಂಜೀವಿ. ಈ ಹಿಂದೆ ನಾಗಾರ್ಜುನ ಈ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡಿದ್ರು. ಆಗ ಸ್ಪರ್ಧಿಯಾಗಿ ಭಾಗವಹಿಸಿದ್ದ ಚಿರು, ನಾಗ್ ಎದುರು 150ನೇ ಸಿನಿಮಾ ಮಾಡೋದಾಗಿ ಒಪ್ಪಿಕೊಂಡಿದ್ರು. ಇದೀಗ ಚಿರು ಈ ಕಾರ್ಯಕ್ರಮದ ನಿರೂಪಣೆ ಮಾಡ್ತಿದ್ದಾರೆ. ಈ ವಾರ ಸ್ಪರ್ಧಿಯಾಗಿ ಬಂದಿದ್ದ ನಾಗಾರ್ಜುನ ಎದಿರು ತಮ್ಮ151ನೇ ಚಿತ್ರದ ಬಗ್ಗೆ ಹೇಳಿದ್ದಾರೆ ಚಿರು. ಈವರೆಗೆ ತಮ್ಮ ಮುಂದಿನ ಚಿತ್ರವನ್ನು ಯಾರು ನಿರ್ದೇಶನ ಮಾಡ್ತಾರೆ ಅನ್ನೋದನ್ನ ಎಲ್ಲೂ ಹೇಳದ ಚಿರು, ಮತ್ತೆ ನಾಗ್ ಮುಂದೆ ಗುಟ್ಟನ್ನ ರಟ್ಟು ಮಾಡಿದ್ದಾರೆ. ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಪಕ್ಕಾ ಮಸಾಲ ಸಿನಿಮಾದಲ್ಲಿ ಚಿರು ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಈ ನ್ಯೂಸ್ ಕೇಳಿ ಮೆಗಾ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

Comments are closed.