ದೀಪಿಕಾಳ ಹೊಸ ಬಾಯ್ ಫ್ರೆಂಡ್ ಚೀನಾದವನಂತೆ!

ಈಗಾಗಲೇ ಸಾಕಷ್ಟು ಬಾರಿ ಪ್ರೀತಿಲಿ ಮುಳುಗೆದ್ದಿರೋ ದೀಪಿಕಾ ಪಡುಕೋಣೆ ಇದೀಗ ಚೀನಿ ಹುಡುಗನನ್ನ ಲವ್ ಮಾಡೋಕೆ ರೆಡಿಯಾಗಿದ್ದಾಳೆ. ಆದ್ರೆ ಇದು ನಿಜ ಜೀವನದಲ್ಲಿ ಅಲ್ಲ, ಬದಲಿಗೆ ಸಿನಿಮಾದಲ್ಲಿ. ಕನ್ನಡತಿ ದೀಪಿಕಾ ಪಡುಕೋಣೆ ಇದೀಗ ಅಂತರಾಷ್ಟಿಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ನಟಿ. ದೀಪಿಕಾ ಸ್ಯಾಂಡಲ್ವುಡ್ನಿಂದ ಬಾಲಿವುಡ್ ಅಂಗಳಕ್ಕೆ ಹಾರಿ ಇತ್ತೀಚೆಗೆ ಹಾಲಿವುಡ್ ಸಿನಿಮಾದಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡು ಬಂದಿದ್ದಾಳೆ. ಪ್ರಥಮ ಚುಂಬನಂ ದಂತ ಭಗ್ನ ಅನ್ನುವಂತೆ ಡಿಪ್ಪಿ ಅಭಿನಯದ ಮೊದಲ ಇಂಟರ್ ನ್ಯಾಷನಲ್ ಸಿನಿಮಾ ಸಕ್ಸಸ್ ಆಗ್ಲಿಲ್ಲ. ಮತ್ತೆ ಹಾಲಿವುಡ್ ಸಹವಾಸವೇ ಬೇಡ ಅಂತಿದ್ದ ಈ ಮಂಗಳೂರು ಚೆಲುವೆಗೆ ಮತ್ತೊಂದು ಇಂಟರ್ ನ್ಯಾಷನಲ್ ಪ್ರಾಜೆಕ್ಟ್ ಸಿಕ್ಕಿದೆ. ಕಥೆ ಕೇಳಿರೋ ಈ ಪೋರಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳಂತೆ. 

ಇದು ಹಾಲಿವುಡ್ ಸಿನಿಮಾ ಅಲ್ಲ. ಬದಲಿದೆ ಇಂಡೋ-ಚೀನಿ ಪ್ರಾಜೆಕ್ಟ್. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಚೀನಿ ಹೀರೊ ಜೊತೆ ತೆರೆಹಂಚಿಕೊಳ್ಳಲಿದ್ದಾಳೆ. ಚೀನಿ ಹೀರೊ ಡೆಂಗ್ ಚಾವ್ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾನಂತೆ. ಇದೊಂದು ಲವ್ ಸ್ಟೋರಿ ಆಗಿದ್ದು, ಡೆಂಗ್ ಚಾವ್ ಮತ್ತು ಡಿಪ್ಪಿ ನಡುವಿನ ಪ್ರೇಮ್ ಕಹಾನಿಯೇ ಸಿನಿಮಾ ತಿರುಳಂತೆ. ಹಾಲಿವುಡ್ ಬಿಟ್ರೆ ಚೀನಾ ಬಾಕ್ಸಾಫೀಸ್ ಸಿಕ್ಕಾಪಟ್ಟೆ ದೊಡ್ಡದು. ಭಾರಿ ಬಡ್ಜೆಟ್ನಲ್ಲಿ ಈ ಸಿನಿಮಾವನ್ನ ಚೀನಿ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆಯಂತೆ. ಈಗಾಗಲೇ ಪಾತ್ರಕ್ಕಾಗಿ ಡಿಪ್ಪಿ ಲುಕ್ ಟೆಸ್ಟ್ ಕೂಡ ಮಾಡಲಾಗಿದೆಯಂತೆ.

ಚಾಂದ್ನಿ ಚೌಕ್ ಟು ಚೈನಾ ಸಿನಿಮಾದಲ್ಲಿ ದೀಪಿಕಾ ಕೊಂಚ ಚೀನಿ ಹುಡುಗಿಯ ಲುಕ್ನಲ್ಲಿ ಕಾಣಿಸಿಕೊಂಡಿದ್ದಳು. ಈ ಸಿನಿಮಾದ ಬಹುತೇಕ ಶೂಟಿಂಗ್ ಚೀನಾದಲ್ಲೇ ನಡೆದಿತ್ತು. ಹಾಗಾಗಿ ಡಿಪ್ಪಿಗೆ ಚೀನಾ ಹೊಸತಲ್ಲ. ಇನ್ನೂ ಇತ್ತೀಚೆಗಷ್ಟೆ ಜಾಕಿಚಾನ್, ಸಿನಿಮಾ ಸೂದ್ ಅಭಿನಯದ ಇಂಡೋ ಚೀನಿ ಸಿನಿನಾ ಕುಂಗ್ ಫು ಯೋಗ ತೆರೆಗೆ ಬಂದಿತ್ತು. ಬಟ್ ಯಾಕೋ ಸಕ್ಸಸ್ ಆಗ್ಲಿಲ್ಲ. ಇನ್ನು ಹಾಲಿವುಡ್ನಲ್ಲಿ ಸಿಗದ ಗೆಲುವನ್ನ ಮತ್ತೊಂದು ಇಂಟರ್ ನ್ಯಾಷನಲ್ ಸಿನಿಮಾದಿಂದ ದೀಪಿಕಾ ಸರಿದೂಗಿಸಿಕೊಳ್ತಾಳ ನೋಡ್ಬೇಕು.

One thought on “ದೀಪಿಕಾಳ ಹೊಸ ಬಾಯ್ ಫ್ರೆಂಡ್ ಚೀನಾದವನಂತೆ!

Comments are closed.