ವಿಜಯದ ಓಟ ಮುಂದುವರಿಸಿದ ಕೊಹ್ಲಿ ಬಾಯ್ಸ್!

ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 208 ರನ್ ಗಳಿಂದ ಬಾಂಗ್ಲಾದೇಶವನ್ನು ಮಣಿಸಿದೆ.

ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದು ಎರಡನೇ ಇನಿಂಗ್ಸ್ ನಲ್ಲಿ 159 ರನ್ ಗಳಿಗೆ ಡಿಕ್ಲೇರ್ ನೀಡುವುದರ ಮೂಲಕ ಬಾಂಗ್ಲಾ ತಂಡಕ್ಕೆ 459 ರನ್ ಗಳ ಟಾರ್ಗೆಟ್ ನೀಡಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 250 ರನ್ ಗಳನ್ನು ಗಳಿಸಿದೆ. ಇದರಿಂದ ಭಾರತ ತಂಡ 208 ರನ್ ಗಳ ಗೆಲುವಿನ ಕೇಕೆ ಹಾಕಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 687 ರನ್ ಸಿಡಿಸಿ ಡಿಕ್ಲೇರ್ ಮಾಡಿಕೊಂಡಿತು. ನಂತರ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 388 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ 299 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಬಾಂಗ್ಲಾದೇಶಕ್ಕೆ 459 ರನ್ ಗಳ ಟಾರ್ಗೆಟ್ ನೀಡಿತು. ಗುರಿ ಬೆನ್ನತ್ತಿದ ಬಾಂಗ್ಲಾ ನಾಲ್ಕನೇ ದಿನ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಂತರ ಸೋಮವಾರ ಐದನೇ ದಿನದಲ್ಲಿ  ಇಶಾಂತ್, ಜಡೇಜ ಮತ್ತು ಅಶ್ವಿನ್ ಉತ್ತಮ ಬೌಲಿಂಗ್ ಮಾಡುವುದರ ಮೂಲಕ ಬಾಂಗ್ಲಾ ತಂಡವನ್ನು ಕಟ್ಟಿ ಹಾಕಿದರು. ಭಾರತದ ಪರ ಅಶ್ವಿನ್ ಮತ್ತು ಜಡೇಜ 4 ವಿಕೆಟ್ ಗಳನ್ನು ಪಡೆದರೆ ಇಶಾಂತ್ 2 ವಿಕೆಟ್ ಪಡೆದು ಮಿಂಚಿದರು.

ಟೀಂ ಇಂಡಿಯಾ ಮೊದಲ ಇನಿಂಗ್ಸ್ 687/6 ಡಿಕ್ಲೇರ್ 

ಬಾಂಗ್ಲಾದೇಶ ಮೊದಲ ಇನಿಂಗ್ಸ್ 388ಕ್ಕೆ ಆಲೌಟ್ 

ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ 159ಕ್ಕೆ ಡಿಕ್ಲೇರ್ 

ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್ 250ಕ್ಕೆ ಆಲೌಟ್ 

Comments are closed.

Social Media Auto Publish Powered By : XYZScripts.com