ಪಾಕ್ ಮಣಿಸಿ ವಿಶ್ವಕಪ್ ಎತ್ತಿ ಹಿಡಿದ ಭಾರತ!

ಹಾಲಿ ಚಾಂಫಿಯನ್ ಭಾರತ ತಂಡ ಅಂಧರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸುವುದರ ಮೂಲಕ ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತ ತಂಡಕ್ಕೆ 197 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ಜಯ ಗಳಿಸುವುದರ ಮೂಲಕ ಎರಡನೆ ಬಾರಿಗೆ ವಿಶ್ವ ಚಾಂಫಿಯನ್ ಆಗಿದ್ದಾರೆ.

ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಭಾರತ ತಂಡ ಫೈನಲ್ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನ ನೀಡಿದ್ದ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಇನಿಂಗ್ಸ್ ಆರಂಭಿಸಿದ  ಕರ್ನಾಟಕದ ಆಟಗಾರ ಜಯರಾಮಯ್ಯ ಹಾಗೂ ಅಜಯ್ ಕುಮಾರ್ ರೆಡ್ಡಿ ಆರಂಭದಿಂದಲೇ ಪಾಕಿಸ್ತಾನ ಬೌಲರ್ ಗಳನ್ನು ಕಾಡಿದರು. ಆದರೆ, ವೈಯಕ್ತಿಕವಾಗಿ 43 ರನ್ ಗಳಿಸಿದ್ದ ರೆಡ್ಡಿ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ಆನಂತರ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ಕೇತನ್ ಪಟೇಲ್ ಅವರು ವೈಯಕ್ತಿಕವಾಗಿ 26 ರನ್ ಗಳಿಸಿದ್ದಾಗ ಗಾಯಗೊಂಡು ಪೆವಿಲಿಯನ್ ಗೆ ಮರಳಿದರು.

ಆಗ, ಕ್ರೀಸ್ ನಲ್ಲಿ ಉಳಿದಿದ್ದ ಆರಂಭಿಕ ಜಯರಾಮಯ್ಯ, ದುನ್ನಾ ವೆಂಕಟೇಶ್ ಅವರೊಂದಿಗೆ ಉತ್ತಮ ಆಟ ಪ್ರದರ್ಶಿಸಿ ತಂಡವನ್ನು ಜಯದ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇನಿಂಗ್ಸ್ ನ ಕೊನೆಯವರೆಗೂ ಅಜೇಯರಾಗುಳಿದ ಅವರು, ಅಜೇಯ 99 ರನ್ ಗಳಿಸುವ ಮೂಲಕ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

2012ರ ಅಂಧರ ಟಿ20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ 29 ರನ್ ಗಳಿಂದ ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿತ್ತು.

3 thoughts on “ಪಾಕ್ ಮಣಿಸಿ ವಿಶ್ವಕಪ್ ಎತ್ತಿ ಹಿಡಿದ ಭಾರತ!

 • October 20, 2017 at 10:53 PM
  Permalink

  Thank you for the good writeup. It in fact was a amusement account it. Look advanced to more added agreeable from you! By the way, how can we communicate?|

 • October 20, 2017 at 11:03 PM
  Permalink

  Unquestionably believe that which you stated. Your favorite reason seemed to be on the internet the easiest thing to remember of.
  I say to you, I certainly get irked at the same time as other people
  consider worries that they plainly do not know about.

  You controlled to hit the nail upon the highest and also outlined out the whole thing without having side effect , people could
  take a signal. Will likely be back to get more.
  Thank you

 • October 21, 2017 at 4:00 AM
  Permalink

  Hi there! This is my first comment here so I just wanted to give a quick shout out and tell you I really enjoy reading
  your blog posts. Can you suggest any other blogs/websites/forums that go over the same topics?
  Thanks!

Comments are closed.

Social Media Auto Publish Powered By : XYZScripts.com