ಸಪ್ತಪದಿ ತುಳಿದ ಕಿರಿಕ್ ಪಾರ್ಟಿ ನಿರ್ದೇಶಕ ರಿಷಭ್ ಶೆಟ್ಟಿ!

ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿಯವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂದರ್ತಿ ಮೂಲದ ಪ್ರಗತಿ ಶೆಟ್ಟಿ ಎಂಬುವವರೊಡನೆ ರಿಷಬ್ ಕುಂದಾಪುರದ ಸಹನಾ ಕಲ್ಯಾಣ ಮಂಟಪದಲ್ಲಿ ಸಪ್ತಪದಿ ತುಳಿದಿದ್ದಾರೆ. 

ಇತ್ತೀಚೆಗೆ ಅವರ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಹೊರ ಬಂದಿದ್ದು ಉತ್ತಮ ಹೆಸರು ಗಳಿಸಿದೆ. ಅಲ್ಲದೆ ಇದೇ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ರಿಷಬ್ ಶೆಟ್ಟಿ ಡಬಲ್ ಖುಷಿಯ ಸಂಭ್ರಮದಲ್ಲಿದ್ದಾರೆ. ಪ್ರಗತಿ ಎಂಬುವವರ ಜೊತೆ ಗುರು ಹಿರಿಯರ ನಿಶ್ಚಯದಂತೆ ಕುಂದಾಪುರದ ಸಹನಾ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯ ಬದ್ಧವಾಗಿ ವಿವಾಹ ಮಹೋತ್ಸವ ನಡೆಯಿತು.

ವಿವಾಹ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ ಕುಂದಾಪುರ ಶೈಲಿಯ ಪಂಚೆ ಶಲ್ಯವನ್ನು  ತೊಟ್ಟು ಎಲ್ಲರನ್ನೂ ಆಕರ್ಷಿಸಿದರು. ವಿವಾಹ ಸಮಾರಂಭಕ್ಕೆ ವಿವಿಧ ಚಲನ ಚಿತ್ರ ಗಣ್ಯರು ಹಾಜರಾಗಿದ್ದರು. ವಿವಾಹ ಸಮಾರಂಭಕ್ಕೆ ಕಿಚ್ಚ ಸುದೀಪ್ ಆಗಮಿಸಿ ವಿವಾಹದ ಶುಭ ಕೋರಿದರು. ಅಲ್ಲದೆ ರಕ್ಷಿತ್ ಶೆಟ್ಟಿ, ಶೀಥಲ್ ಶೆಟ್ಟಿ, ರಶ್ಮಿಕಾ ಮೆನನ್, ಮೇಗನಾ ಗಾಂವ್ಕರ್, ಸಂಯುಕ್ತ ಹೆಗ್ಡೆ ಸೇರಿದಂತೆ ವಿವಿಧ ಚಿತ್ರರಂಗದ ಗಣ್ಯರು ವಧುವರರಿಗೆ ಶುಭಾಷಯ ಕೋರಿದರು.

2 thoughts on “ಸಪ್ತಪದಿ ತುಳಿದ ಕಿರಿಕ್ ಪಾರ್ಟಿ ನಿರ್ದೇಶಕ ರಿಷಭ್ ಶೆಟ್ಟಿ!

  • October 24, 2017 at 12:57 PM
    Permalink

    Fantastic site. Plenty of useful information here. I’m sending it to a few friends ans also sharing in delicious. And of course, thanks for your sweat!

  • October 24, 2017 at 1:27 PM
    Permalink

    My brother recommended I might like this website. He was totally right. This post truly made my day. You cann’t imagine simply how much time I had spent for this info! Thanks!

Comments are closed.

Social Media Auto Publish Powered By : XYZScripts.com