ರಣ್ಬೀರ್-ಕ್ಯಾಟ್ ಸಿನಿಮಾ ದಾಖಲೆ ಸರಿ, ಪ್ರೇಕ್ಷಕರ ಕಥೆಯೇನು..?

ಲವ್ ಬ್ರೇಕ್ ಅಪ್ ಆದ್ಮೇಲೆ ರಣ್ಬೀರ್ ಕಪೂರ್, ಕತ್ರೀನಾ ಕೈಫ್ ಜಗ್ಗಾ ಜಾಸೂಸ್ ಸಿನಿಮಾದಲ್ಲಿ ಮತ್ತೆ ಜೊತೆಯಾಗಿ ಅಭಿನಯಿಸ್ತಿದ್ದಾರೆ. ಈಗಾಗಲೇ ಈ ರೊಮ್ಯಾಂಟಿಕ್ ಅಡ್ವೆಂಚರಸ್ ಸಿನಿಮಾದ ಪೋಸ್ಟರ್, ಟ್ರೇಲರ್ ರಿಲೀಸ್ ಆಗಿ ಭಾರಿ ಸದ್ದು ಮಾಡ್ತಿದೆ. ಜಗ್ಗಾ ಜಾಸೂಸ್ ಏಪ್ರಿಲ್ ಮೊದಲವಾರ ಪ್ರೇಕ್ಷಕರ ಮುಂದೆ ಬರ್ತಿದ್ದು, ಈ ಸಿನಿಮಾದಲ್ಲಿ 29 ಹಾಡುಗಳಿವೆಯಂತೆ. ಸ್ವತಃ ಟ್ಯೂನ್ ಹಾಕಿರೋ ಮ್ಯೂಸಿಕ್ ಡೈರೆಕ್ಟರ್ ಪ್ರೀತಂ ಈ ವಿಚಾರವನ್ನ ಕನ್ಫರ್ಮ್ ಮಾಡಿದ್ದಾರೆ. ಆದರೆ ಇದನ್ನ ಕೇಳಿ ಬಿಟೌನ್ ಮಂದಿ ದಂಗಾಗಿದ್ದಾರೆ.

30-40 ವರ್ಷಗಳ ಹಿಂದೆ ಸಿನಿಮಾಗಳಲ್ಲಿ 10-12 ಹಾಡುಗಳಿರುತ್ತಿದ್ದವು. ಇಂದ್ರಸಭಾ ಅನ್ನೋ ಹಿಂದಿ ಸಿನಿಮಾದಲ್ಲಿ ಸುಮಾರು 60ಕ್ಕೂ ಹೆಚ್ಚು ಹಾಡುಗಳಿದ್ದವು. ಅದು ಇವತ್ತಿಗೂ ಒಂದು ದಾಖಲೆ. ಆದರೆ ಇವತ್ತಿನ ಕಾಲಕ್ಕೆ 29 ಸಾಂಗ್ಸ್ ಅಂದ್ರೆ ಪ್ರೇಕ್ಷಕರಿಗೆ ಕಷ್ಟವಾಗೋದಂತೂ ಗ್ಯಾರೆಂಟಿ. ಸಿನಿಮಾದಲ್ಲಿ ಒಂದು ಹಾಡು ಬಂದ್ರೇನೆ ನೋಡುಗರು ಆಕಳಿಸೋಕೆ ಶುರು ಮಾಡ್ತಾರೆ. ಅಂತಾದ್ರಲ್ಲಿ 29 ಹಾಡುಗಳಂದ್ರೆ ಪರಿಸ್ಥಿತಿ ಹೇಗಿರುತ್ತೆ ಹೇಳಿ. ಕಥೆಯ ವೇಗಕ್ಕೆ ತಡೆಯಾಗುತ್ತೆ ಅಂತ ಹಾಡುಗಳೇ ಇಲ್ಲದೇ ಸಿನಿಮಾ ಮಾಡ್ತಿರೋ ಈ ಹೊತ್ತಲ್ಲಿ ಜಗ್ಗಾ ಜಾಸೂಸ್ ಆಲ್ಬಮ್ ಕಥೆ ಕೇಳಿ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ.

ಜಾಗ್ಗಾಜಾಸೂಸ್ ಕಥೆ ಬಯಸಿದಕ್ಕೆ ಇಷ್ಟು ಹಾಡುಗಳನ್ನ ಕಂಪೋಸ್ ಮಾಡಿದ್ದೀನಿ ಅಂತಾರೆ ಸಂಗೀತ ನಿರ್ದೇಶಕ ಪ್ರೀತಂ. ಅನುರಾಗ್ ಬಸು ನಿರ್ದೇಶನದ ಈ ಸಿನಿಮಾವನ್ನ ದೇಶವಿದೇಶದಲ್ಲಿ ಶೂಟ್ ಮಾಡಲಾಗಿದೆ. ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡಿ ಈ ರೊಮ್ಯಾಂಟಿಕ್ ಮ್ಯೂಸಿಕಲ್ ಅಡ್ವೆಂಚರಸ್ ಸಿನಿಮಾ ಕುರಿತು ಭಾರಿ ಕುತೂಹಲವನ್ನೇ ಕೆರಳಿಸಿದೆ.

Comments are closed.

Social Media Auto Publish Powered By : XYZScripts.com