ಮೈಸೂರು ಯುವಕನನ್ನುವರಿಸಿದ ಚೈನಾ ಯುವತಿ!

ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂಡೋ ಚೈನಾ  ಮ್ಯಾರೇಜ್ ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಮೈಸೂರಿನ  ಯುವಕನನ್ನು ಚೈನಾ ದೇಶದ ಯುವತಿ ವರಿಸಿದ್ದಾಳೆ.

ನಾಲ್ಕು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ತಮ್ಮ ಪೊಷಕರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.  ಭಾರತದ ಡೇವಿಡ್ ಅನೋಕ್, ಚೈನಾದ ವಾಂಗ್ ಟಾಂಗ್ ಮದುವೆಯಾಗಿರುವ ಯುವ ಜೊಡಿ. ಡೇವಿಡ್ ಮೈಸೂರಿನ ಆರ್.ಎಸ್ ನಾಯ್ಡು ನಗರದ ನಿವಾಸಿ. ವಾಂಗ್ ಟಾಂಗ್ ಚೈನಾದ ಗೋವಾಂಚೊ ನಗರದ ನಿವಾಸಿ. ಇಬ್ಬರೂ ಚೈನಾದ ಸೈಲೆಂಟ್ ಓಜಾನ್ ಶಿಪ್ಪಿಂಗ್ ಕಂಪನಿಯ ಉದ್ಯೋಗಿಗಳಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು.

2011ರಲ್ಲಿ ಚೈನಾ ಸೇರಿದ್ದ ಡೇವಿಡ್ ಅನೋಕ್. 2012ರಲ್ಲಿ ವಾಂಗ್ ಟಾಂಗ್ ರನ್ನು ನೋಡಿ ಪ್ರೀತಿಯ ಬಲೆಯಲ್ಲಿ  ಡೇವಿಡ್ ಅನೋಕ್ ಬಿದ್ದಿದ್ದರು. ಇಬ್ಬರ ಪೋಷಕರ ಜೊತೆ ಚರ್ಚಿಸಿ ಒಪ್ಪಿಗೆ ಪಡೆದು ಮದುವೆಯಾಗಿರುವ ಜೋಡಿ. ಮೈಸೂರಿನ ಚರ್ಚ್ ನಲ್ಲಿ ವಿವಾಹವಾಗಿ, ಗ್ರ್ಯಾಂಡ್ ಮರ್ಕ್ಯೂರಿ ಹೊಟೆಲ್ ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ನವಜೋಡಿ ಕಂಡು ಕುಟುಂಬಸ್ಥರು ಮತ್ತು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

Comments are closed.