ಅಜಯ್ ಕುಮಾರ್ ರೆಡ್ಡಿ ಸಿಡಿಲಬ್ಬರದ ಶತಕ!

ಆರಂಭಿಕ ಅಜಯ್ ಕುಮಾರ್ ರೆಡ್ಡಿ ಅವರು ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಭಾರತ ತಂಡ 152 ರನ್‌ಗಳಿಂದ ಅಂಧರ ವಿಶ್ವಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ನೇಪಾಳ ತಂಡವನ್ನು ಸೋಲಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 289 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಹಿಂಬಾಲಿಸಿದ ನೇಪಾಳ 5 ವಿಕೆಟ್‌ಗೆ 137 ರನ್ ಕಲೆ ಹಾಕಿತು.

ಗುರಿ ಬೆನ್ನಟ್ಟಿದ ರಮೆಶ್ ಬಹದೂರ್ (35) ತಂಡಕ್ಕೆ ಚೇತರಿಕೆಯ ಆಟವನ್ನು ನೀಡಿದರು. ಉಳಿದಂತೆ ಪದಮ್ ಬಹದೂರ್ (28) ಭಾರತೀಯ ಬೌಲರ್‌ಗಳನ್ನು ಕೊಂಚ ಕಾಡಿದರು. ಉಳಿದ ಬ್ಯಾಟ್ಸ್‌ ಮನ್‌ಗಳು ರನ್ ಕಲೆ ಹಾಕಲಿಲ್ಲ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತದ ಅಜಯ್ ಹಾಗೂ ದುರ್ಗಾ ರಾವ್ (53) ತಂಡಕ್ಕೆ ಶತಕದ ಜೊತೆಯಾಟ ನೀಡಿದರು.

ವೆಂಕಟೇಶ್ವರ್ 33 ಎಸೆತಗಳಲ್ಲಿ 11 ಬೌಂಡರಿ ಸೇರಿದಂತೆ 82 ರನ್ ಸೇರಿಸಿದರು. ಅಜಯ್ 50 ಎಸೆತಗಳಲ್ಲಿ 17 ಬೌಂಡರಿ ಒಳಗೊಂಡಂತೆ 109 ರನ್ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್ 

ಭಾರತ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 289

ನೇಪಾಳ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 137

Comments are closed.

Social Media Auto Publish Powered By : XYZScripts.com