ಅಗ್ರಸ್ಥಾನಕ್ಕಾಗಿ ಜಡೇಜಾ ಮತ್ತು ಅಶ್ವಿನ್ ಹೋರಾಟ!

ಅಂತಾರಾಷ್ಟ್ರೀಯ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪಡೆಯಲು ಭಾರತದ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಹೋರಾಟ ನಡೆಸಲಿದ್ದು, ಗುರವಾರದಿಂದ ಆರಂಭವಾಗುವ ಬಾಂಗ್ಲಾ ವಿರುದ್ಧದ ಏಕೈಕ ಟೆಸ್ಟ್ ರೋಚಕತೆ ಹೆಚ್ಚಿಸಿದೆ.

ರಾಜೀವ್ ಗಾಂಧಿ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ. ಬಾಂಗ್ಲಾ ವಿರುದ್ಧದ 8 ಪಂದ್ಯಗಳಲ್ಲಿ 6 ರಲ್ಲಿ ಜಯ ಹಾಗೂ 2 ಭಾರತ ಡ್ರಾ ಸಾಧಿಸಿದೆ. ತನ್ನ ಅಜೇಯ ಓಟವನ್ನು ಮುನ್ನಡೆಸುವ ಯೋಜನೆ ವಿರಾಟ್ ಪಡೆಯದ್ದಾಗಿದೆ.

ಭಾರತದ ಪ್ರಮುಖ ಸ್ಪಿನ್ ಬೌಲರ್ ಅಶ್ವಿನ್ 887 ಅಂಕಗಳೊಂದಿಗೆ ಟೆಸ್ಟ್‌ನಲ್ಲಿ ಅಗ್ರ ಸ್ಥಾನ ಹೊಂದಿದ್ದಾರೆ. ಜಡೇಜಾ 879 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಯಾರು ನಂಬರ್ 1 ಸ್ಥಾನಕ್ಕೇ ಏರುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಯಾರಿಗೆ ಸ್ಥಾನ?: ಭಾರತ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಯಾವ ತಂತ್ರದೊಂದಿಗೆ ಮೈದಾನವನ್ನು ಪ್ರವೇಶಿಸುತ್ತದೆ ಎಂಬ ಲೆಕ್ಕಾಚಾರದ ಮೇಲೆ ಕರುಣ್ ನಾಯರ್, ಜಯಂತ್ ಯಾದವ್ ಅವರ ಸ್ಥಾನ ಅವಲಂಬಿತವಾಗಿದೆ. ಒಂದು ವೇಳೆ ಭಾರತ ಐದು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದಲ್ಲಿ ಭಾರತದ ಪರ ಎರಡನೇ ತ್ರಿಶಕ ಬಾರಿಸಿದ ಕರುಣ್ ನಾಯರ್ ಅವರ ಸ್ಥಾನಕ್ಕೆ ಕುತ್ತು. ನಾಲ್ಕು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದಲ್ಲಿ ಕರುಣ್ ಆಡುವ ಸಾಧ್ಯತೆ ಹೆಚ್ಚು. ಇನ್ನು ಇಶಾಂತ್ ಶರ್ಮಾ, ಉಮೇಶ್ ಯಾದವ್ ವೇಗದ ನೊಗವನ್ನು ಹೊರಲಿದ್ದಾರೆ.

ಒಂದು ಪಂದ್ಯದಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ ಮಾತ್ರಕ್ಕೆ ವರ್ಷವಿಡಿ ಬೆವರು ಹರಿಸಿದಕ್ಕೆ ಬೆಲೆ ಇಲ್ಲದಂತಾಗುತ್ತದೆ. ರಹಾನೆ ಫಿಟ್ ಆಗಿದ್ದರೆ ಅವರು ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೊಹ್ಲಿ ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com