ಮೇಟಿ ಪ್ರಕರಣ ಅನುಪಮಾ ಶಣೈ ಮತ್ತು ಮುಮಾಲಿ ವಿಚಾರಣೆ!

ಮಾಜಿ ಸಚಿವ ಎಚ್. ವೈ. ಮೇಟಿ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಬಳ್ಳಾರಿಯಲ್ಲಿ ಇಂದು ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಮತ್ತು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ವಿಚಾರಣೆ ನಡೆಸಿದ್ದಾರೆ.

ಆರಂಭದಲ್ಲಿ ಪ್ರಕರಣ ಒಪ್ಪಂದದ ಸೆಕ್ಸ್ ಮಾದರಿಯಲ್ಲಿದೆ. ಆದರೆ  ಈ ಬಗ್ಗೆ ತಿಳಿದುಕೊಂಡ ಕೆಲವರು ಸಂತ್ರಸ್ತೆ ಮೂಲಕ ಹನಿ ಟ್ರ್ಯಾಪ್ ಮಾಡಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆದಿದೆ. ಈಗಾಗಲೇ ಪ್ರಕರಣದ ಆರೋಪಿಗಳ ವಿಚಾರಣೆ ನಡೆಸಿರುವ ಸಿಐಡಿ ಅಧಿಕಾರಿಗಳು  ಪ್ರಕರಣವನ್ನು ಯಾವ ರೀತಿ ಮತ್ತು ಯಾರೆಲ್ಲ ಬಳಸಿಕೊಂಡಿದ್ದಾರೆ ಎನ್ನುವ ಕುರಿತು ವಿಚಾರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ನೋಟಿಸ್ ನೀಡಿದರೂ ಹಾಜರಾಗದ ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಮತ್ತು ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರನ್ನು  ಬಳ್ಳಾರಿಯ ಐಬಿ ಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ರಾಜಶೇಖರ್ ವಿಚಾರಣೆ ಆರಂಭವಾಗಿದ್ದು, ಇನ್ನೂ ಮಾಜಿ ಡಿವೈಎಸ್ ಪಿ ಅನುಪಮ ಶಣೈ ಆಗಮಿಸಿಲ್ಲ. ಅವರು ಆಗಮಿಸುವ  ಸಾಧ್ಯತೆ ಇದೆ.

Comments are closed.