ಕಳಸ ಬಂಡೂರಿ- ನೀರು ಕೊಡಿ ಇಲ್ಲ ದಯಾಮರಣ ನೀಡಿ!

ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆ ಕುಡಿಯುವ ನೀರಿನ ಯೋಜನೆ ಮಹದಾಯಿಗಾಗಿ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆಯುತ್ತಿರುವ ಹೋರಾಟ ಅಂತಿಮ ಘಟ್ಟ ತಲುಪಿದ್ದು ಹೋರಾಟಗಾರರು ದಯಾಮರಣಕ್ಕೆ ಸಿದ್ದರಾಗಿ, ಸರ್ಕಾರಕ್ಕೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

ಸುಮಾರು 600 ದಿನಗಳಿಂದ ಹೋರಾಟ ಮಾಡಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಸರು ಎರೆಚಾಟಕ್ಕೆ ರೋಸಿ ಹೋಗಿರುವ ಮಹದಾಯಿ ಹೋರಾಟಗಾರರು ಇಂದು ಸಭೆ ನಡೆಸಿ ಸಭೆಯಲ್ಲಿ ದಯಾಮರಣಕ್ಕೆ ಸಿದ್ಧರಾಗಿದ್ದಾರೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಯೋಜನೆ ಅನುಷ್ಟಾನಗೂಳ್ಳದೆ ಇದ್ದಲ್ಲಿ ಸುಮಾರು 5000 ರೈತರು ರಾಷ್ಟ್ರಪತಿಗೆ ದಯಾಮರಣ ಸಲ್ಲಿಸಲು ನಿರ್ಧರಿಸಿದ್ದಾರೆ.

ಹಿಂದೆ ಪ್ರತ್ಯೇಕ ರಾಜ್ಯದ ಭಾವುಟ ಹಾರಿಸಿದ್ದ ಮಹದಾಯಿ ಹೋರಾಟಗಾರರು, ಸರ್ಕಾರದ ವಿರುದ್ದ ಕಹಳೆ ಮೊಳಗಿಸಿದ್ದರು. ನವಲಗುಂದದ ರೈತ ಭವನದ ಎದುರು ಬಾವುಟ ಹಾರಿಸಿ ಹೋರಾಟವನ್ನು ತೀವ್ರಗೂಳಿಸಿದ್ದರು. ಅಲ್ಲದೆ ಕಳೆದ ಜುಲೈ 27 ರಂದು ಮಹದಾಯಿ ಗಲಭೆ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ಸರ್ಕಾರಿ ಆಸ್ತಿಗೆ ಬೆಂಕಿ ಹಚ್ಚಿದ್ದರು. ಇದೆಲ್ಲದರ ಪರಿಣಾಮ 287 ರೈತರನ್ನು ಸರ್ಕಾರ ಬಳ್ಳಾರಿ ಹಾಗೂ ಚಿತ್ರದುರ್ಗದ ಜೈಲಿಗೆ ಅಟ್ಟಿತ್ತು. ಸದ್ಯ ರೈತರು ಅಂತಿಮ ನಿರ್ಣಯ  ಕೈಗೂಂಡಿದ್ದು, ನೀರು ಕೂಡಿ ಇಲ್ಲವೆ ದಯಾಮರಣ ನೀಡಿ ಎಂದು ಆಗ್ರಹಿಸಿದ್ದಾರೆ.

3 thoughts on “ಕಳಸ ಬಂಡೂರಿ- ನೀರು ಕೊಡಿ ಇಲ್ಲ ದಯಾಮರಣ ನೀಡಿ!

  • October 20, 2017 at 6:41 PM
    Permalink

    I would love to add that in case you do not surely have an insurance policy or you do not remain in any group insurance, you could possibly well really benefit from seeking assistance from a health agent. Self-employed or people who have medical conditions commonly seek the help of a health insurance specialist. Thanks for your text.

Comments are closed.