ಭೂಕಂಪಕ್ಕೆ ಗಡ, ಗಡ ನಡುಗಿದ ಉತ್ತರ ಭಾರತ

ಉತ್ತರಾಖಂಡದಲ್ಲಿ ಸೋಮವಾರ ರಾತ್ರಿ 10:30ರ ಸುಮಾರಿಗೆ ಕಂಡುಬಂದ ತೀವ್ರತರನಾದ ಭೂಕಂಪನವು ಇಡೀ ಉತ್ತರ ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮೆಟರ್ಲಾಜಿಕಲ್ ಇಲಾಖೆಯ ಮಾಹಿತಿಯ ಪ್ರಕಾರ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.8ರಷ್ಟು ದಾಖಲಾಗಿದೆ ಎಂದು ತಿಳಿದು ಬಂದಿದೆ. ಭೂಕಂಪದ ಕೇಂದ್ರವು ಪರ್ವತ ಪ್ರದೇಶವಾದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಕಂಡುಬಂದಿದೆ. ಯುರೋಪಿಯನ್ ಮೆಡಿಟರೇನಿಯನ್ ಸೈಸ್ಮಲಾಜಿಕಲ್ ಸೆಂಟರ್ (EMSC) ಮತ್ತು ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೀಸ್ (USGS) ಭೂಕಂಪದ ಕೇಂದ್ರವು ಪೀಪಲ್ ಕೋಟ ಸನಿಹದಲ್ಲಿರುವುದಾಗಿ ಗುರುತಿಸಿವೆ.

ಉತ್ತರ ಭಾರತದಾದ್ಯಂತ ಭೂಮಿ ಕಂಪಿಸಿರುವ ಅನುಭವವಾಗಿದ್ದು, ಸುಮಾರು 30 ಸೆಕೆಂಡುಗಳ ಕಾಲ ಭೂಮಿ ನಡುಗಿದ್ದಾಗಿ ವರದಿಯಾಗಿದೆ. ದೆಹಲಿ, ಚಂಢಿಗಡ, ಆಗ್ರಾ, ಡೆಹರಾಡೂನ್ ನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅದರಲ್ಲಿಯೂ ಭೂಕಂಪದ ಕೇಂದ್ರವಾಗಿರುವ ಉತ್ತರಾಖಂಡ ರಾಜ್ಯವೂ ಹಿಮಾಲಯ ಪರ್ವತ ಶ್ರೇಣಿಯ ಭಾಗವಾಗಿರುವದರಿಂದ ಭೂಕಂಪದ ಚಟುವಟಿಕೆಗಳು ಘಟಿಸುವುದು ಸಾಮಾನ್ಯ ಎನ್ನಲಾಗುತ್ತಿದೆ. ಸದ್ಯಕ್ಕೆ ಘಟನೆಯ ತೀವ್ರತೆ ಹಾಗೂ ಆಸ್ತಿಪಾಸ್ತಿ ನಷ್ಟದ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

Comments are closed.

Social Media Auto Publish Powered By : XYZScripts.com