ಮತ್ತೊಂದು ಸಿನಿಮಾಗೆ ಸಿದ್ಧರಾದ ವಿಕ್ಕಿವರುಣ್!

ಕೆಂಡ ಸಂಪಿಗೆ ಚಿತ್ರದ ಮೂಲಕ ಮನೆ ಮಾತಾಗಿದ್ದ ಕನ್ನಡ ಸಿನಿಮಾ ನಟ ವಿಕ್ಕಿ ವರುಣ್ ಮತ್ತೊಮ್ಮೆ ಕನ್ನಡ ಸಿನಿಮಾದಲ್ಲಿ ಜಾದು ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಅವರು ಕನ್ನಡ ಸಿನಿಮಾ ಒಂದಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ.

ಕೆಂಡ ಸಂಪಿಗೆ ಸಿನಿಮಾ ತೆರೆ ಕಂಡು ಒಂದುವರೆ ವರ್ಷದ ನಂತರ ಮತ್ತೆ ಸಿನಿಮಾ ಮಾಡಲು ಸಿದ್ಧರಾಗಿದ್ದು ಕನ್ನಡ ಸಿನಿ ರಸಿಕರಿಗೆ ಉತ್ತಮ ಸಂದೇಶವುಳ್ಳ ಚಿತ್ರ ನೀಡಲಿದ್ದಾರಂತೆ. ಅಲೆಮಾರಿ ಸಂತು ನಿರ್ದೇಶನದ ಚಿತ್ರದಲ್ಲಿ ವಿಕ್ಕಿ ವರುಣ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸ್ವತಃ ನಿರ್ದೇಶಕ ಸಂತು ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾದಲ್ಲಿ ಕಥೆಗೆ ತಕ್ಕಂತಹ ಪಾತ್ರದಾರಿಯನ್ನು ಹುಡುಕುತ್ತಿದ್ದೆ. ನಗರದಿಂದ ಹಳ್ಳಿಗೆ ತೆರಳುವ ನಗರದಿಂದ ಹಳ್ಳಿಗೆ ತೆರಳು ಹುಡುಗನ ಪಾತ್ರಕ್ಕಾಗಿ ನಾನು ನಟನನ್ನು ಹುಡುಕುತ್ತಿದ್ದೆ. ಈ ಪಾತ್ರಕ್ಕೆ ವಿಕ್ಕಿ ವರುಣ್ ಹೊಂದಾಣಿಕೆಯಾಗುತ್ತಾರೆ. ಈ ಕಥೆಯನ್ನು ಒಪ್ಪಿಕೊಳ್ಳುವುದಕ್ಕೂ ಮೊದಲು ವಿಕ್ಕಿ ಹಲವಾರು ಕಥೆಗಳನ್ನು ಕೇಳಿದ್ದರು. ಆದರೆ ಅವುಗಳಾವುವು ವಿಕ್ಕಿ ಅವರಿಗೆ ಒಪ್ಪಿಗೆಯಾಗಿರಲಿಲ್ಲ. ಈ ಕಥೆಯನ್ನು ಕೇಳಿದ ನಂತರ ಸಿನಿಮಾ ಮಾಡಲು ವಿಕ್ಕಿ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಕಥೆ ತುಂಬಾ ಚಿಕ್ಕದಾಗಿದ್ದು ವಿಶೇಷತೆಯಿಂದ ಕೂಡಿದ್ದು ಕನ್ನಡಿಗರು ಒಪ್ಪಿಕೊಳ್ಳುತ್ತಾರಂತೆ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಸಿನಿಮಾ ಚಿತ್ರೀಕರಣ ಆರಂಭಿಸಲಿದ್ದಾರಂತೆ.

Comments are closed.