16 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡ ಕರ್ನಾಟಕ!

ವೇಗಿ ಎಸ್.ಅರವಿಂದ್ ಅವರ ಮಾರಕ ದಾಳಿಗೆ ಗೋವಾ ತಂಡ ತತ್ತರಿಸಿದೆ.  ದಕ್ಷಿಣ ವಲಯ ಅಂತರ್ ರಾಜ್ಯ ಟಿ- 20 ಟೂರ್ನಿಯಲ್ಲಿ ಕರ್ನಾಟಕ 6 ವಿಕೆಟ್‌ ಗಳಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟ್ ಮಾಡಿದ ಗೋವಾ ತಂಡಕ್ಕೆ ವೇಗದ ಬೌಲರ್ ಅರವಿಂದ್ ಕಾಡಿದರು. ಅರವಿಂದ್ 29 ರನ್‌ ನೀಡಿ ಪ್ರಮುಖ  4 ವಿಕೆಟ್ ಪಡೆದರು. ಗೋವಾ ಪರ ಸ್ವಪ್ನಿಲ್ (34), ಅವರನ್ನು ಹೊರತು ಪಡಿಸಿದರೆ ದೊಡ್ಡ ಆಟ ಬಾರಲಿಲ್ಲ. ಇದರಿಂದ ಬೃಹತ್ ಮೊತ್ತ ಗಳಿಸುವಲ್ಲಿ ವಿಫಲವಾಯಿತು. ಸಾಧಾರಣ ಗುರಿಯನ್ನು ಹಿಂಬಾಲಿಸಿದ ರಾಜ್ಯ ತಂಡದ ಮಾಯಾಂಕ್ (11), ವಿನಯ್ ಕುಮಾರ್ (34) ಹಾಗೂ ಪವನ್ ದೇಶಪಾಂಡೆ (32) ಚೇತೋಹಾರಿ ಬ್ಯಾಟಿಂಗ್ ನಡೆಸಿದರು.

ಆಡಿರುವ ಐದು ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿರುವ ಕರ್ನಾಟಕ ತಂಡ ದಕ್ಷಿಣ ವಲಯ ವಿಭಾಗದಲ್ಲಿ 16 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ಡುಕೊಂಡಿದೆ.

ಸಂಕ್ಷಿಪ್ತ ಸ್ಕೋರ್

ಗೋವಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 120

ಕರ್ನಾಟಕ 11.4 ಓವರ್‌ಗಳಲ್ಲಿ 4 ವಿಕೆಟ್‌ಗೆ 121 

Comments are closed.

Social Media Auto Publish Powered By : XYZScripts.com