ಭಾರತ ಚಿತ್ರರಂಗದ ನಂಬರ್ 1 ಡ್ಯಾನ್ಸರ್ ಯಾರು ಗೊತ್ತಾ..?

ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಬೆಸ್ಟ್ ಡ್ಯಾನ್ಸರ್ ಯಾರು…? ಪ್ರಭುದೇವಾ, ರಾಘವಾ ಲಾರೆನ್ಸ್, ಹೃತಿಕ್ ರೋಷನ್, ಚಿರಂಜೀವಿ, ಅಲ್ಲು ಅರ್ಜುನ್ ಇವರ್ಯಾರು ಅಲ್ಲಾ. ಇವರೆಲ್ಲರನ್ನೂ ಈ ಲಿಸ್ಟ್ ನಲ್ಲಿ ಹಿಂದಕ್ಕೆ ತಳ್ಳಿ ಮೊದಲ ಸ್ಥಾನ ಅಲಂಕರಿಸಿದ್ದಾನೆ ಟಾಲಿವುಡ್ ಯಂಗ್ ಟೈಗರ್ ಎನ್‍ಟಿಆರ್. ಭಾರತ ಚಿತ್ರರಂಗದಲ್ಲಿ ಬೆಸ್ಟ್ ಡ್ಯಾನ್ಸರ್ ಯಾರು ಅಂತ ನಡೆಸಿದ ಸರ್ವೇಯಲ್ಲಿ ಜೂನಿಯರ್ ಎನ್‍ಟಿಆರ್ ಫಸ್ಟ್ ಪ್ಲೇಸ್ ಸಿಕ್ಕಿದೆ.  ಆದ್ರೆ ಟಾಲಿವುಡ್‍ಗೆ ಅಸಲಿ ಡ್ಯಾನ್ಸ್‍ನ ರುಚಿ ಹತ್ತಿಸಿದ ಚಿರಂಜೀವಿ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೋದೇ ಆಶ್ಚರ್ಯದ ಸಂಗತಿ.

ಸರ್ವೇಯಲ್ಲಿ ಶೇಕಡಾ 22ರಷ್ಟು ಮತಗಳನ್ನ ಪಡೆದ ಎನ್‍ಟಿಆರ್ ಫಸ್ಟ್ ಪ್ಲೇಸ್‍ನಲ್ಲಿದ್ರೆ, ಶೇಕಡಾ 2ರಷ್ಟು ಮತಗಳನ್ನ ಪಡೆದಿರೋ ಚಿರಂಜೀವಿ 10ನೇ ಸ್ಥಾನದಲ್ಲಿದ್ದಾರೆ. ಶೇಕಡಾ 13ರಷ್ಟು ವೋಟ್ ಪಡ್ಕೊಂಡಿರೋ ಹೃತಿಕ್ ರೋಷನ್ 2ನೇ ಸ್ಥಾನದಲ್ಲಿದ್ರೆ, 11ರಷ್ಟು ಮತಗಳೊಂದಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮೂರನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಪ್ರಭುದೇವಾ ನಾಲ್ಕು, ರಾಘವ ಲಾರೆನ್ಸ್ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಮಾಧುರಿ ದೀಕ್ಷಿತ್ ಆರನೇ ಸ್ಥಾನದಲ್ಲಿದ್ರೆ, ಐಶ್ವರ್ಯ ರೈ ಬಚ್ಚನ್ ಒಂಬತ್ತನೇ ಸ್ಥಾನವನ್ನ ಅಲಂಕರಿಸಿದ್ದಾರೆ. ಇನ್ನೂ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾಗೆ ಈ ಲಿಸ್ಟ್‍ ನಲ್ಲಿ 17ಕ್ಕೆ ಸ್ಥಾನ ಸಿಕ್ಕಿದೆ. ಕೆಲವರು ಈ ಸರ್ವೇಯನ್ನ ಒಪ್ಪಿಕೊಳ್ಳೊಕೆ ಸಿದ್ಧರಿಲ್ಲ. ಯಾಕಂದ್ರೆ ಪ್ರಭುದೇವಾ, ಚಿರಂಜೀವಿಗಿಂತ ಎನ್‍ಟಿಆರ್ ಡ್ಯಾನ್ಸ್ ಚೆನ್ನಾಗಿ ಮಾಡ್ತಾರಾ ಅಂತ ಕೇಳೋರು ಇದ್ದಾರೆ. ಆದ್ರೆ ತಾರಕ್ ಅಭಿಮಾನಿಗಳು ಮಾತ್ರ ನಮ್ಮ ಹೀರೋ ಕುಣಿಯೋದ್ರಲ್ಲಿ ಬೆಸ್ಟೂ ಅಂತ ಸಂಭ್ರಮಿಸ್ತಿದ್ದಾರೆ.

Comments are closed.