ಮುಂದಿನ ಚುನಾವಣೆಯಲ್ಲೂ ನಮ್ಮ ಪಕ್ಷಕ್ಕೇ ಅಧಿಕಾರ!

ಕಾಂಗ್ರೆಸ್ ಪ್ರಸ್ತುತ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ್ದು, ಮುಂದಿನ ಬಾರಿಯೂ ಸಹ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಂದಿನ ಐದು ವರ್ಷಗಳಿಗೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬಂದು ಆಡಳಿತ ನಡೆಸಲಿದೆ ಎಂದು ಹೇಳುವ ಮೂಲಕ ಆರು ತಿಂಗಳಲ್ಲಿ ರಾಜ್ಯ ಸಕಾ೯ರ ಪತನವಾಗುತ್ತದೆ ಎಂದಿದ್ದ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ನಂಜನಗೂಡು ಉಪ ಚುನಾವಣೆ ಅಭ್ಯಥಿ೯ ಇನ್ನು ತೀಮಾ೯ನವಾಗಿಲ್ಲ. ಕಳಲೆ ಕೇಶವಮೂತಿ೯ಗೆ ಕಾಂಗ್ರೆಸ್ ಟಿಕೆಟ್ ನೀಡಲು ಅವರಿನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ ಎಂದು ತಿಳಿಸಿದ ಅವರು, ಜೆಡಿಎಸ್ ಉಚ್ಚಾಟಿತ ಶಾಸಕರು ಕಾಂಗ್ರೆಸ್ ಗೆ ಸೇರುವ ಬಗ್ಗೆ ಪ್ರತಿಕ್ರಿಯಿಸಿ ಅವರು ಪಕ್ಷಕ್ಕೆ ಬಂದರೆ ಬೇಡ ಅನ್ನಕ್ಕಾಗುತ್ತಾ. ನನ್ನನ್ನ ಭೇಟಿ ಮಾಡಿದ್ದು ನಿಜ ನಾವು ಹೈಕಮಾಂಡ್ ಭೇಟಿ ಮಾಡಿ ನಿಧಾ೯ರ ಕೈಗೊಳ್ಳುತ್ತೆವೆ ಎಂದು ತಿಳಿಸಿದ್ದೇನೆ ಎಂದರು.

ಸಿಎಂ ಬದಲಾವಣೆ ಬಗ್ಗೆ ಜನಾಧ೯ನ ಪೂಜಾರಿ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ಅವರ ಬಗ್ಗೆ ಕಮೆಂಟ್ ಮಾಡಲ್ಲ. ನನ್ನನ್ನ ಸಿಎಂ ಮಾಡಿದ್ದು ಶಾಸಕಾಂಗ (ಅಸೆಂಬ್ಲಿ) ಮತ್ತು ಹೈಕಮಾಂಡ್ . ಹಾಗಾಗಿ ನಾನೇನು ಕಮೆಂಟ್ ಮಾಡಲ್ಲ ಎಂದರು.

Comments are closed.