ಕೆಎಂಎಫ್ ಅಧ್ಯಕ್ಷ ನಾಗರಾಜು ರಾಜೀನಾಮೆ ನೀಡದಿದ್ದಲ್ಲಿ ಕ್ರಮ!

ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಅವರು ತಮ್ಮ ಸ್ಥಾನಕ್ಕೆ  ರಾಜೀನಾಮೆ ನೀಡಬೇಕು. ಒಂದು ವೇಳೆ  ರಾಜೀನಾಮೆ ನೀಡದಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.

ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಅವರಿಂದ ರಾಜೀನಾಮೆ ಪಡೆದು ಶಾಸಕ ಎಂ.ಪಿ.ರವೀಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕರ ತಂಡ ಎಂ.ಪಿ.ರವೀಂದ್ರ ಅವರ ನೇತೃತ್ವದಲ್ಲಿ ಇಂಧನ ಸಚಿವ ಡಿಕೆಶಿವಕುಮಾರ್ ಅವರ ಸದಾಶಿವ ನಗರದ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ,  ತಮ್ಮ ಹಾಗೂ ದಿವಂಗತ ಸಚಿವ ಮಹದೇವಪ್ರಸಾದ್ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆದ ಆಂತರಿಕ ಸಭೆಯ ಒಪ್ಪಂದಂತೆ ಮೊದಲ 2 ವರ್ಷದ ಕೆಎಂಎಫ್ ಅಧ್ಯಕ್ಷ ಅವಧಿಯನ್ನು ಪಿ.ನಾಗರಾಜು ಅವರಿಗೆ ನೀಡಲಾಗಿತ್ತು. ನಂತರದ ಮೂರು ವರ್ಷದ ಅವಧಿಯನ್ನು ಶಾಸಕ ಎಂ.ಪಿ.ರವೀಂದ್ರ ಅವರಿಗೆ ನೀಡಲು ಮಾತುಕತೆ ನಡೆದಿತ್ತು. ಇದಕ್ಕೆ ಪಿ.ನಾಗರಾಜು ಸಹ ಒಪ್ಪಿಗೆ ನೀಡಿದ್ದರು. ಒಪ್ಪಂದಂತೆ ಅವಧಿ ಮುಕ್ತಾಯಗೊಂಡ ನಂತರ ನಾಗರಾಜು ಅವರು ಸ್ವಕ್ಷೇತ್ರ ರಾಮನಗರದಲ್ಲಿ ಮುಖ್ಯಮಂತ್ರಿಗಳ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದ ಮರುದಿನ ರಾಜಿನಾಮೆ ನೀಡುವುದಾಗಿ ಹೇಳಿದ್ದರು. ನಂತರ ಅಭಿವೃದ್ಧಿಯ ನೆಪ ಹೇಳಿ ಕಾಲ ತಳ್ಳುತ್ತಿದ್ದರು. ಅಲ್ಲದೇ ಮಹದೇವಪ್ರಸಾದ್ ಅವರ ನೇತೃತ್ವದಲ್ಲಿ ಕೆಎಂಎಫ್ ಆಡಳಿತ ಮಂಡಳಿ ಸಭೆಯ ನಂತರ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

3 thoughts on “ಕೆಎಂಎಫ್ ಅಧ್ಯಕ್ಷ ನಾಗರಾಜು ರಾಜೀನಾಮೆ ನೀಡದಿದ್ದಲ್ಲಿ ಕ್ರಮ!

 • October 24, 2017 at 12:12 PM
  Permalink

  Thɑnks for your marvelous posting! Ι tгuly enjoyyed reading it, you will be a gгeat aᥙthor.
  I wiill ensure that I bookmаrk your blog and will often come bacҝ
  sometime soon. I want too encourage you to definiteⅼy continue yoiur
  gгeɑt posts, have a nice afternoon! http://www.pokerqq.org/

Comments are closed.

Social Media Auto Publish Powered By : XYZScripts.com