ಡಿ.ಕೆ ಶಿವಕುಮಾರ್ ರಿಂದ ಎಚ್ ಡಿಕೆಗೆ ಟಾಂಗ್!

ಎಸ್ ಎಂ ಕೃಷ್ಣ ರಾಜಕೀಯ ನಿರ್ಧಾರ ಅಚ್ಚರಿ ತಂದಿದೆ. ಅವರು ಕಾಂಗ್ರೆಸ್ ಬಿಡೋ ನಿರ್ಧಾರ ನನಗೆ ಶಾಕ್ ನೀಡಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವರ ಜೊತೆ ಮಾತುಕತೆ ನಡೆಸೋಕೆ ಕಾಲ ಪಕ್ವ ಆಗಿಲ್ಲ. ನಾನಿನ್ನು ಶಾಕ್ ನಿಂದ ಹೊರಗೆ ಬಂದಿಲ್ಲ. ಬಿಜೆಪಿಯವರು ಅಡ್ವಾಣಿ, ಮುರಳಿಮನೋಹರ್ ಜೋಷಿ ಅವರನ್ನು ನಡೆಸಿಕೊಂಡಿದ್ದರ ಬಗ್ಗೆ ಮಾತನಾಡಿಕೊಳ್ಳಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಅವಧಿಗೂ ಮುನ್ನವೇ ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಭವಿಷ್ಯ ಹೇಳಲು ಟ್ರೈನಿಂಗ್ ಪಡೆದಿರಬಹುದು. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲ್ಲ.  ಒಂದು ವೇಳೆ ದೇವೇಗೌಡರು ಹೇಳಿದ್ದರೆ ಸೀರಿಯಸ್ ಆಗಿ ಪರಿಗಣಿಸಬಹುದಿತ್ತು. ಬೇಕಾದರೆ ದೇವೇಗೌಡರು ಹೇಳಲಿ ಎಂದ ಅವರು ಸಿದ್ದರಾಮಯ್ಯ ಸರ್ಕಾರ ಮಡಿಕೆ ಸರ್ಕಾರ ಅಲ್ಲ, ಕಂಚಿನ ಸರ್ಕಾರ – ಹುಣಸೇ ಹಣ್ಣು ಹಚ್ಚಿ ತೊಳೆದಷ್ಟೂ ಹೊಳೆಯುತ್ತದೆ.  ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದ ಬೇಕಿಲ್ಲ. ಕಾಂಗ್ರೆಸ್ ಧ್ವಜ ಹಿಡಿಯೋ ಸೌಭಾಗ್ಯ ಎಲ್ಲರಿಗೂ ಸಿಗಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪಕ್ಷವನ್ನು ಸಮರ್ಥಿಸಿಕೊಂಡರು.

Comments are closed.