ಕ್ಷುಲ್ಲಕ ವಿಚಾರಕ್ಕೆ ಜಗಳ- ಕೊಲೆಯಲ್ಲಿ ಅಂತ್ಯ!

ಕೊತ್ತನೂರಯ ತಿಮ್ಮೇಗೌಡಲೇಔಟ್ ನಲ್ಲಿ ಇಬ್ಬರು ಪುಟ್ಟ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಅತಿರೇಕಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಉಗಾಂಡ ಮೂಲದ ಪ್ಲೋರಿನ್ಸ್ ಕೊಲೆಯಾದ ಮಹಿಳೆ. ಹಿಮಾಚಲ ಪ್ರದೇಶ ಮೂಲದ ಇಶಾನ್ ಎಂಬಾತನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಇವನು ಎಂಟೆಕ್ ಪದವಿದರನಾಗಿದ್ದು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಉಗಾಂಡ ಮೂಲದ ಪ್ಲೋರೆನ್ಸ್ ಪರಿಚಿತವಾಗಿ ಒಪ್ಪಂದದ ಮೇರೆಗೆ ಮನೆ ಸೇರಿದ್ದ. ಈ ವೇಳೆ ಒಪ್ಪಂದ ಕುರಿತು ಇಶಾನ್ ಮತ್ತು ಪ್ಲೋರೆನ್ಸ್ ಜಗಳ ಮಾಡಿಕೊಂಡು ಹಲ್ಲೆ ಪ್ರತಿಹಲ್ಲೆ ಮಾಡಿ ಇಶಾನ್ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ಪ್ಲೋರೆನ್ಸ್ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಇಶಾನ್ ಉದ್ಯೋಗ ಹರೆಸಿ ಬೆಂಗಳೂರಿಗೆ ಬಂದಿದ್ದನು. ಇವರಿಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆಯ ಒಪ್ಪಂದದ ವಿಚಾರವಾಗಿ ಇಶಾನ್ ಮತ್ತು ಪ್ಲೊರಿನ್ಸ್ ನಡುವೆ ಜಗಳ ಆರಂಭವಾಗಿದೆ. ಆಗ ಇಶಾನ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಪ್ಲೊರೆನ್ಸ್ ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಇಶಾನ್ ಅದೇ ಚಾಕುವನ್ನು ಕಿತ್ತುಕೊಂಡು ಪ್ಲೊರಿನ್ ಳನ್ನು ಕೊಲೆ ಮಾಡಿದ್ದಾನೆ. ತನಿಖೆ ಮಾಡಲು ಬಂದ ಪೊಲೀಸರ ಮೇಲೆ ಉಗಾಂಡ ಮೂಲದವರು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂಬಂಧ ಓರ್ವ ನನ್ನ ವಶಕ್ಕೆ ಪಡೆದಿರುವ ಪೊಲೀಸರು.

Comments are closed.

Social Media Auto Publish Powered By : XYZScripts.com