ಯಜುವೇಂದ್ರ ಚಹಲ್ ದಾಳಿಗೆ ಆಂಗ್ಲರು ಕಕ್ಕಾಬಿಕ್ಕಿ!

ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆದ 3ನೇ ಟಿ-20 ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ 2-1 ಅಂತರದಿಂದ ತನ್ನ ಮುಡಿಗೇರಿಸಿಕೊಂಡಿದೆ. ಮಾಜಿ ನಾಯಕ ದೋನಿ ಮತ್ತು ಸುರೇಶ್ ರೈನಾ ಬಿರುಸಿನ ಬ್ಯಾಟಿಂಗ್ ನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀ ಇಂಡಿಯಾ 20 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಈ ಬೃಹತ್ ಮೊತ್ತದ ಬೆನ್ನತ್ತಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿತು. ಉತ್ತಮ ಬೌಲಿಂಗ್ ಮಾಡಿದ ಯಜುವೇಂದ್ರ ಚಹಲ್ ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ಪಂದ್ಯದಲ್ಲಿ 25 ರನ್ ನೀಡಿ 6 ವಿಕೆಟ್ ಕಬಳಿಸಿದ ಚೌಹಾಲ್ ಪಂದ್ಯ ಪುರುಷಕ್ಕೆ ಭಾಜನರಾದರು.

3 ನೇ ಟಿ 20 ಪಂದ್ಯದಲ್ಲಿ ಭಾರತ 75 ರನ್ ಗಳಿಂದ ಜಯಗಳಿಸಿದ್ದು, 2-1 ಅಂತರದಿಂದ ಸರಣಿಯನ್ನು ಗೆದ್ದಿದೆ. ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಇಂಗ್ಲೆಂಡ್ ಗೆ 203 ರನ್ ಗಳ ಬೃಹತ್ ಗುರಿಯನ್ನು ನೀಡಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 16.3 ಓವರ್ ಗಳಲ್ಲಿ 127 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಶರಣಾಯಿತು.

ದೋನಿ ಮತ್ತು ರೈನಾ ಅರ್ಧಶತಕ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಜಿ ನಾಯಕ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ ನಲ್ಲಿ ಮೊದಲು ಅರ್ಧಶತಕ ದಾಖಲಿಸಿದರು. ರೈನಾ ಸಹ ಅಬ್ಬರದ ಆಟವಾಡಿ ಅರ್ಧಶತಕ ದಾಖಲಿಸಿದರು.

ನೋ ಬಾಲ್ ಗೆ ಬಲಿಯಾದ ರಾಹುಲ್: ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸುತ್ತಿದ್ದ ಕೆ.ಎಲ್.ರಾಹುಲ್ ನೋ ಬಾಲ್ ಗೆ ಬಲಿಯಾದರು. ಅಂಪೈರ್ ನೋ ಬಾಲ್ ಆಗಿರುವುದನ್ನು ಗಮನಿಸದ ಕಾರಣ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.

ಸಂಕ್ಷಿಪ್ತ ಸ್ಕೋರ್

ಭಾರತ 20 ಓವರ್ ಗಳಿಗೆ 202-6

ಇಂಗ್ಲೆಂಡ್ 16.3 ಓವರ್ ಗೆ 127 (all out)

One thought on “ಯಜುವೇಂದ್ರ ಚಹಲ್ ದಾಳಿಗೆ ಆಂಗ್ಲರು ಕಕ್ಕಾಬಿಕ್ಕಿ!

Comments are closed.

Social Media Auto Publish Powered By : XYZScripts.com