ಬಜೆಟ್ ಬಗ್ಗೆ ರಾಜಕೀಯ ನಾಯಕರು ಏನಂದರು ಗೊತ್ತಾ!

ಅಭಿವೃದ್ಧಿಗೆ ಪೂರಕವಾಗಿಲ್ಲ

ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲಾ, ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ.  ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ರೈತರ ಸಾಲಮನ್ನಾ ಮಾಡಿಲ್ಲಾ. ಬರಗಾಲದ ಬಗ್ಗೆ ಬಜೆಟ್ ನಲ್ಲಿ ಚಕಾರವನ್ನೆತ್ತಿಲ್ಲಾ. ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿಲ್ಲಾ. ಬಜೆಟ್ ನ ಪ್ರಮುಖ ಅಂಶಗಳನ್ನು ಗಮನಿಸುವುದಾದರೆ ಇದು ನಿರಾಶಾದಾಯಕ ಬಜೆಟ್ ಆಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ


ನಿರಾಶದಾಯಕ ಬಜೆಟ್

ಕೇಂದ್ರದ ಬಜೆಟ್ ತುಂಬಾ ನಿರಾಸೆ ಮೂಡಿಸಿದೆ. ಯಾವುದೇ ರೀತಿಯ ಹೊಸ ಯೋಜನೆಗಳಿಲ್ಲ. ಬಡವರಿಗೆ, ಮಧ್ಯಮ ವರ್ಗ, ವಿದ್ಯಾರ್ಥಿಗಳಿಗೆ ಏನೂ ಇಲ್ಲ. ಯಾವುದೇ ಹೊಸ ವಿಚಾರಗಳು ಆಯವ್ಯಯದಲ್ಲಿಲ್ಲ. ರೂಪಾಯಿ ಅಪಮೌಲ್ಯ ಹಿನ್ನೆಲೆ. ಕಪ್ಪು ಹಣಕ್ಕೆ ಕಡಿವಾಣ, ಟೆರರಿಸ್ಟ್ ನಿಯಂತ್ರಣ, ನಕಲಿ ನೋಟು ಕಡಿವಾಣ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಇದು ಯಾವುದೂ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡಿಲ್ಲ. ಬೇರೆ ರೂಪದಲ್ಲೂ ರೈತರಿಗೆ ಪರಿಹಾರ ನೀಡಿಲ್ಲ. ದೇಶದ ತೆರಿಗೆ ವ್ಯವಸ್ಥೆಯನ್ನ ಸುಧಾರಿಸಿಲ್ಲ.

ಡಾ.ಜಿ.ಪರಮೇಶ್ವರ್ ಗೃಹ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರು.

 ಚುನಾವಣೆ ಮೇಲೆ ಪರಿಣಾಮ ಬೀರಲ್ಲ

ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳ ಹಿನ್ನಲೆಯಲ್ಲಿ ರೈತರಿಗೆ ಕಬ್ಬಿನ ಬಾಕಿ ಮೊತ್ತ 9 ಸಾವಿರ ಕೋಟಿ ಕೊಡಲು ಬಜೆಟ್ ನಲ್ಲಿ ಹೇಳಲಾಗಿದೆ. ರೈತರ ಸಾಲದ ಮೇಲಿನ ಬಡ್ಡಿ ಮನ್ನಕ್ಕೆ ಕೇವಲ 60 ದಿನದ ಬಡ್ಡಿ ಸಾಕೆ? ನರೇಗ ಯೋಜನೆಯಿಂದ ಆಗುವ ಲೂಟಿ ನಿಲ್ಲಿಸಲು ಏನು ಕ್ರಮ ಇಲ್ಲ. ನರೇಗ ಬಡವರಿಗೆ ಮುಟ್ಟುತ್ತಿಲ್ಲ. ಕೆಲವರ ಪಾಲಾಗುತ್ತಿದೆ. ಸಹಕಾರ ಸಂಸ್ಥೆ ಗಳಿಗೆ 18 ಸಾವಿರ ಕೋಟಿ ಸಾಲದು. ನಿರಾವರಿ ಯೋಜನೆಗಳಿಗೆ ಸಾಕಾಗಲ್ಲ. ಈ ಬಜೆಟ್ ಭಾಷಣಕ್ಕೆ ಇದೆ. ಚುನಾವಣೆಗೆ ದೊಡ್ಡ ಮಟ್ಟದ ಪರಿಣಾಮ ಬೀರದು.

ಎಚ್.ಡಿ.ಕುಮಾರಸ್ವಾಮಿ. ಮಾಜಿ ಮುಖ್ಯಮಂತ್ರಿ.

 

Comments are closed.