SMK ಬೆಂಬಲಕ್ಕೆ ನಿಂತ ಮತ್ತೊಬ್ಬ ಕೈ ಮುಖಂಡ!

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರಿಂದ ಶ್ರೀರಂಗಪಟ್ಟಣದ ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀ ಕಂಠಯ್ಯ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಮ್ಮ ಕುಟುಂಬ 1952ರಲ್ಲಿ ರಾಜಕೀಯ ಪ್ರಾರಂಭ ಮಾಡಿದರು. ನನ್ನ ತಾತಾ ಚುಂಚೇಗೌಡರು 1957ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. ಪ್ರಾಮಾಣಿಕ ರಾಜಕೀಯ ಮಾಡಿದರೂ ಅಂದಿನಿಂದ ರಾಜಕೀಯವಾಗಿ ಸತತವಾಗಿ ನೋವುಂಡ ಕುಟುಂಬ ನಮ್ಮದಾಗಿದೆ. ನಮ್ಮ ಕುಟುಂಬದ್ದೂ  ಹಾಗೂ ಇತ್ತೀಚೆಗೆ ರಾಜಕಾರಣ ಆರಂಭಿಸಿದವರ ಆಸ್ತಿ ಪರಿಶೀಲಿಸಿ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ನಾಯಕರಾದ ಕೃಷ್ಣರವರ ನೋವನ್ನ ನಾವು ಹತ್ತಿರದಿಂದ ನೋಡಿದವರು. ಅವರಿಲ್ಲದ ಕಾಂಗ್ರೆಸ್ ರಾಜಕಾರಣವನ್ನು ಅರಗಿಸಿಕೊಳ್ಳಲು ಕಷ್ಟವಾಗಿದೆ. ಕಾಂಗ್ರೆಸ್ 2005ರ ತನಕ ಸೋನಿಯಾ ಅವರ ಹಿಡಿತದಲ್ಲಿತ್ತು. ಆ ನಂತರ ನಡೆದ ರಾಜಕೀಯ ವಿದ್ಯಾಮಾನಗಳು ನಮ್ಮನ್ನ ದೂರ ಮಾಡುವ ಸನ್ನಿವೇಶ ತಂದೊಡ್ಡಿದವು. 2008ರಲ್ಲಿ ನನಗೆ ಕಾಂಗ್ರೆಸ್ ಟಿಕೆಟ್ ಅನೌನ್ಸ್ ಆಗಿತ್ತು. ಆಗ ನನ್ನ ಹೆಸರು ಬದಲಿಸಿ ಬೇರೆಯವರಿಗೆ ಕೊಟ್ಟರು. 2013ರಲ್ಲಿ ಮತ್ತೆ ನನಗೇ ಟಿಕೆಟ್ ಅನೌನ್ಸ್ ಮಾಡಿ ಮತ್ತೊಬ್ಬನಿಗೆ ಕೊಟ್ಟರು. ಡೆಲ್ಲಿ ಮಟ್ಟದಲ್ಲಿ ಘೋಷಣೆಯಾದ ಟಿಕೆಟ್ ಮತ್ತೆ ಬದಲಾದರೆ ಏನು ಕಾರಣ? ಇದೆಲ್ಲವನ್ನೂ ನೋಡಿದರೆ 2005ರಿಂದೀಚೆಗೆ ಹೈಕಮಾಂಡ್ ದುರ್ಬಲವಾಗಿದೆ ಎನಿಸುತ್ತದೆ ಎಂದು ತಿಳಿಸಿದರು.

ನನ್ನಂತಹ ಯುವಕರು ಬಹಳ ಜನ ಕಾಂಗ್ರೆಸ್ ನಲ್ಲಿ ನರಳಿದ್ದಾರೆ. ಹೊಸ ಹೈಕಮಾಂಡ್ ಯುವಕರನ್ನ ಅವಮಾನಿಸಿದೆ. ಕೃಷ್ಣರ  ರಾಜ್ಯ ಸರ್ಕಾರ ಯೋಜನೆಗಳನ್ನ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಿತ್ತು. ಅನ್ನಭಾಗ್ಯ ಯೋಜನೆಯಲ್ಲಿ 30ಕೆಜಿ ಕೊಡ್ತೀನಿ ಅಂತೇಳಿ ಈಗ ಮೂರ್ನಾಲ್ಕು ಕೆಜಿ ಕೊಡ್ತಿದೆ. ಇದು ಬಡ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ನ್ಯೂನ್ಯತೆಗಳಿಂದ ಸರ್ಕಾರ, ಪಕ್ಷಕ್ಕೆ ಡ್ಯಾಮೇಜ್. ಕೃಷ್ಣರು ಜಾರಿಗೆ ತಂದ ಯೋಜನೆಗಳನ್ನು ಮುಂದುವರೆಸಲಿಲ್ಲ. ರಾಜಕೀಯ ಮಾಡೋದು ಅಂದರೆ ಒಂದು ಪಕ್ಷ ಒಡೆಯೋದು ಅನ್ಕೊಂಡಿದೆ ರಾಜ್ಯ ಸರ್ಕಾರ. ರಾಜ್ಯಸಭಾ ಚುನಾವಣೆ ವೇಳೆ ಅವಶ್ಯಕತೆ ಇಲ್ಲದ ಮತ ಪಡೆದು ಕಾಂಗ್ರೆಸ್ ನ ಮೈತ್ರಿ ಪಕ್ಷವಾದ ಜೆಡಿಎಸ್ ನ ಪಕ್ಷವನ್ನು ಸರ್ಕಾರ ಹೊಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

3 thoughts on “SMK ಬೆಂಬಲಕ್ಕೆ ನಿಂತ ಮತ್ತೊಬ್ಬ ಕೈ ಮುಖಂಡ!

Comments are closed.

Social Media Auto Publish Powered By : XYZScripts.com