ಬದುಕಲ್ಲಿ ಬೆಂದವರು ಮಾತ್ರ ಬೇಂದ್ರೆ ಆಗಲು ಸಾಧ್ಯ!

ರಸವೇ ಜನನ, ವಿರಸವೇ ಮರಣ ಸಮರಸವೇ ಜೀವನ ಎಂದು ನಾಡಿಗೆ ತಿಳಿಸಿದ ವರಕವಿ, ಕನ್ನಡದ ಎರಡನೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಹಾಗೂ ಅಂಬಿಕಾತನ ದತ್ತ ಎಂದೇ ಹೆಸರು ಪಡೆದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನ ಇಂದು.

ಸಾಹಿತ್ಯ ಲೋಕದಲ್ಲಿ ಅತ್ಯನ್ನತ ಪ್ರಶಸ್ತಿ ಪಡೆದು ಕನ್ನಡ ಸಾಹಿತ್ಯವನ್ನು ಉತ್ತುಂಗ ಶಿಖರಕ್ಕೇರಿಸಿದ ದ.ರಾ.ಬೇಂದ್ರೆರವರು ಕಡುಬಡತನದಲ್ಲಿ ಹುಟ್ಟಿ ಸಾಹಿತ್ಯ ಲೋಕದಲ್ಲಿ ಮಿನುಗು ತಾರೆಯಾಗಿ ಪ್ರಜ್ವಲಿಸಿದವರು. ಬೇಂದ್ರೆಯವರ ಜೀವನವನ್ನು ಕಂಡ ಕೆಲ ಸಾಹಿತಿಗಳು ಹೇಳುವಂತೆ ಯಾರು ಬದುಕಿನಲ್ಲಿ ಬೇಯುತ್ತಾರೊ ಅವರು ಮಾತ್ರ ಬೇಂದ್ರೆ ಆಗಲು ಸಾಧ್ಯ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೂರಾರು ಕವಿತೆಗಳನ್ನು ನೀಡಿದ ಬೇಂದ್ರೆಯವರ ಗೀತೆಗಳು ಇಂದಿಗೂ ಅಜರಾಮರ. “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ನೀ ಹೀಂಗಾ ನೋಡಬ್ಯಾಡ ನನ್ನ ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ವರಕವಿ ಬೇಂದ್ರೆ ಬರೆದಿದ್ದಾರೆ.

ಬೇಂದ್ರೆರವರು 1896ರ ಜನವರಿ 31 ರಂದು ರಾಮಚಂದ್ರ ಭಟ್ಟ ಮತ್ತು  ಅಂಬಿಕೆ (ಅಂಬವ್ವ) ದಂಪತಿ ಮಗನಾಗಿ ಜನಿಸಿದರು. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಗೆ ಬಂದು ನೆಲೆಸಿದರು. ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದ ಇವರ ಕೈ ಹಿಡಿದಿದ್ದು ಪ್ರಾಧ್ಯಾಪಕ ವೃತ್ತಿ. ಪ್ರಾಧ್ಯಾಪಕರಾಗಿ ಜೀವನದ ಮೌಲ್ಯ ಮತ್ತು ಕಷ್ಟ, ಸುಖಗಳನ್ನು ತಿಳಿಸುವ ಸಾಹಿತ್ಯದೊಂದಿಗೆ ಜನರಿಗೆ ಹತ್ತಿರವಾಗಿದ್ದರು.

ಬೇಂದ್ರೆಯವರು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು. ಅವರ ಜೀವನದ ಅನುಭವ, ಸಂತಸ, ಪ್ರೇಮ, ಕಾಮ ಇತ್ಯಾದಿ ವಿಚಾರಗಳನ್ನೊಳಗೊಂಡ ಸಖಿಗೀತೆ ಎಂಬ ಕೃತಿ ಬರೆದು ಎಲ್ಲರಲ್ಲೂ ಮೆಚ್ಚುಗೆ ಪಡೆದರು. 1981 ರಲ್ಲಿ ಇವರು ಮರಣ ಹೊಂದಿದರು. 1973 ರಲ್ಲಿ ಇವರು ರಚಿಸಿದ ನಾಕು ತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

4 thoughts on “ಬದುಕಲ್ಲಿ ಬೆಂದವರು ಮಾತ್ರ ಬೇಂದ್ರೆ ಆಗಲು ಸಾಧ್ಯ!

 • October 16, 2017 at 4:48 PM
  Permalink

  I have to express some appreciation to the writer just for rescuing me from this particular trouble. Just after looking throughout the search engines and seeing ways that were not pleasant, I believed my life was over. Living minus the answers to the problems you’ve solved by way of your main short post is a serious case, as well as the ones that would have negatively affected my career if I had not noticed your web blog. That capability and kindness in playing with all things was important. I don’t know what I would have done if I hadn’t encountered such a step like this. I am able to at this time look ahead to my future. Thank you so much for this impressive and sensible help. I won’t be reluctant to refer the website to any individual who wants and needs direction on this subject.

 • October 24, 2017 at 12:38 PM
  Permalink

  There are some attention-grabbing deadlines in this article however I don’t know if I see all of them heart to heart. There is some validity however I will take hold opinion till I look into it further. Good article , thanks and we wish extra! Added to FeedBurner as well

 • October 24, 2017 at 1:10 PM
  Permalink

  Keep up the fantastic work , I read few content on this web site and I conceive that your weblog is real interesting and has circles of excellent info .

 • October 24, 2017 at 1:34 PM
  Permalink

  I’m writing to let you understand what a cool discovery my friend’s child obtained going through your site. She noticed a good number of issues, which included how it is like to possess a very effective coaching mood to get other people quite simply know just exactly a number of extremely tough issues. You really exceeded her expectations. Thank you for offering such valuable, dependable, edifying and as well as fun tips about that topic to Gloria.

Comments are closed.

Social Media Auto Publish Powered By : XYZScripts.com