ಬಜೆಟ್ ನಲ್ಲಿ ಯಾವುದಕ್ಕೆ ಆಧ್ಯತೆ ನೀಡಲಾಗುತ್ತದೆ ಗೊತ್ತಾ!

ಪ್ರಧಾನಿ ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿದ ನಂತರ ಮೊದಲ ಬಜೆಟ್ ಮಂಡನೆಯಾಗುತ್ತಿದ್ದು ದೇಶಾದ್ಯಂತ ಜನರಲ್ಲಿ ಹಲವಾರು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.

ನರೇಂದ್ರ ಮೋದಿಯವರ ಸರ್ಕಾರ ಅಕ್ರಮ ಮತ್ತು ಬೇನಾಮಿ ಆಸ್ತಿ ಮೇಲೆ ಕಣ್ಣಿಟ್ಟಿರುವುದರಿಂದ ಬಜೆಟ್ ನಲ್ಲಿ ಯಾವ ಹೊಸ ಘೋಷಣೆ ಮಾಡಲಿದ್ದಾರೆ ಎಂದು ಜನರಲ್ಲಿ ಕುತೂಹಲ ಮೂಡಿಸಿದೆ.

ನೋಟು ರದ್ದತಿ ನಂತರ ನಗದು ರಹಿತ ವಹಿವಾಟುಗಳನ್ನು ಪ್ರೋತ್ಸಾಹಿಸುತ್ತಿರುವ ಕೇಂದ್ರ ಸರ್ಕಾರ ನಗದು ಬದಲು ಕಾರ್ಡ್ ಬಳಸಿ ವ್ಯವಹಾರ ನಡೆಸುವವರಿಗೆ ಡಿಸ್ಕೌಂಟ್  ಆಫರ್ಗಳನ್ನು ಘೋಷಿಸುವ ಸಾಧ್ಯತೆ ಇದೆ, ಡೆಬಿಟ್  ಕಾರ್ಡ್ ಬಳಸಿ ಟೋಲ್ ಪಾವತಿ ಮಾಡುವವರಿಗೆ ಇಂಥಾ ಸೌಲಭ್ಯಗಳು ದಕ್ಕುವ ನಿರೀಕ್ಷೆ ಇದೆ.

ಬಜೆಟ್ ಪೂರ್ವ ಸಮೀಕ್ಷೆಯಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡುವ ಬಗ್ಗೆ ಜನಾಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ಈಗಿರುವ 2.5 ಲಕ್ಷ ತೆರಿಗೆ ಮಿತಿಯನ್ನು  4 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

ನಗರ ಪ್ರದೇಶಗಳಲ್ಲಿ ಮನೆ ಇಲ್ಲದೇ ಇರುವವರಿಗೆ ಮನೆ ನಿರ್ಮಿಸಿಕೊಡುವ ಗುರಿ ಇಟ್ಟು ಆರಂಭಿಸಿದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಬಜೆಟ್ನಲ್ಲಿ ಆದ್ಯತೆ ಸಿಗಬಹುದು. ಯೋಜನೆಯಡಿಯಲ್ಲಿ  ಬ್ಯಾಂಕ್ನಿಂದ ಸಾಲ ಪಡೆದು ಮನೆ ನಿರ್ಮಿಸುವವರಿಗೆ ಬಡ್ಡಿ ದರದಲ್ಲಿ ಇಳಿಕೆ ನೀಡುವ ಸಾಧ್ಯತೆ ಇದೆ. ಎರಡು ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದವರಿಗೆ ಬಡ್ಡಿದರದಲ್ಲಿ ಇಳಿಕೆ ನೀಡುವ ಸಾಧ್ಯತೆಯನ್ನೂ ಬಜೆಟ್ನಲ್ಲಿ ನಿರೀಕ್ಷಿಸಬಹುದು.

Comments are closed.