ಫೆ.1 ರಿಂದ ATM ನಲ್ಲಿ ಹಣ ಡ್ರಾ ಮಾಡಲು ಮಿತಿ ಇಲ್ಲ!

ನೋಟು ನಿಷೇಧದ ನಂತರ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಆರ್ ಬಿಐ ಏರಿದ್ದ ಮಿತಿಯನ್ನು ಫೆಬ್ರವರಿ 1ರಿಂದ ಹಿಂಪಡೆದಿದೆ.

ಇನ್ನು ಕರೆಂಟ್ ಅಕೌಂಟ್ ಅಥವಾ ಕ್ಯಾಶ್ ಕ್ರೆಡಿಟ್ ಅಕೌಂಟ್ ಅಥವಾ ಓವರ್ ಡ್ರಾಫ್ಟ್ ಅಕೌಂಟ್ ನಿಂದ ದಿನಕ್ಕೆ 24 ಸಾವಿರ ರುಪಾಯಿ ಹಣ ಡ್ರಾ ಮಾಡುವ ಮಿತಿಯನ್ನು ಮುಂದುವರೆಸಿದೆ. ಅಲ್ಲದೆ ಫೆಬ್ರವರಿ 1 ರಿಂದ ಎಟಿಎಂ ಗಳಲ್ಲಿ ಹಣ ವಿತ್ ಡ್ರಾ ಮಾಡಲು ಯಾವುದೇ ರೀತಿಯ ಮಿತಿ ಇಲ್ಲ. ಎಲ್ಲರೂ ತಮಗೆ ಅವಶ್ಯಕತೆ ಇರುವಷ್ಟು ಡ್ರಾ ಮಾಡಿಕೊಳ್ಳಬಹುದು.

ನೋಟ್ ಬ್ಯಾನ್ ಆದ ನಂತರ ಆರ್ ಬಿಐ ದಿನಕ್ಕೆ ಕೇವಲ ಎರಡು ಸಾವಿರ ರೂಗಳನ್ನು ಮಾತ್ರ ಡ್ರಾ ಮಾಡಲು ಅವಕಾಶ ನೀಡಿತ್ತು. ತದ ನಂತರ ಜನವರಿ 1 ರಿಂದ ದಿನಕ್ಕೆ ನಾಲ್ಕು ಸಾವಿರ ಹಣ ಡ್ರಾ ಮಾಡುವಂತೆ ಮಿತಿ ಏರಿತು. ಬ್ಯಾಕ್ ನಲ್ಲಿ ಹಣ ಡ್ರಾ ಮಾಡಲು ವಾರಕ್ಕೆ 24 ಸಾವಿರ ರೂ ಗೆ ಮಿತಿ ಏರಿತ್ತು. ಆದರೆ ಫೆಬ್ರವರಿ 1ರಿಂದ  ಈ ಎಲ್ಲಾ ಮಿತಿಗಳನ್ನು ಆರ್ ಬಿಐ ಸಡಿಲಗೊಳಿಸಿ ಜನಸಾಮಾನ್ಯರಿಗೆ ಅವಶ್ಯಕತೆ ಇರುವಷ್ಟು ಹಣ ಪಡೆಯಲು ತಿಳಿಸಿದೆ.

 

Comments are closed.

Social Media Auto Publish Powered By : XYZScripts.com