ಕಾಂಗ್ರೆಸ್ ಗೆ ಎಸ್ ಎಂ ಕೃಷ್ಣ ಗುಡ್ ಬೈ…

ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಸ್ ಎಂ ಕೃಷ್ಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ದಿಡೀರ್ ಎಂದು ತಮ್ಮ ರಾಜೀನಾಮೆಯ ನಿರ್ಧಾರ ತಿಳಿಸಿದ ಎಸ್ ಎಂ ಕೆ ಅದರ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ರಾಜೀನಾಮೆಯನ್ನ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ
ಸಾಕಷ್ಟು ಆಲೋಚನೆ ಮಾಡಿಯೇ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಹೈಕಮಾಂಡ್ ನಡವಳಿಕೆಗಳು, ರಾಜ್ಯ ಸರ್ಕಾರದ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವ ವಿಷಯ ತಿಳಿಸಿದಾಗ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಮುಖಂಡರಿಗು ಶಾಕ್ ಆಗಿತ್ತು. ಹೀಗಾಗಿ ಎಲ್ಲೆಡೆಯೂ ಕೆಲ ಹೊತ್ತು ಮೌನ ಆವರಿಸಿತ್ತು. ಬಳಿಕ  ಹಿರಿಯ ಮುಖಂಡ ರಾಜಶೇಖರನ್ ಮಧ್ಯ ಪ್ರವೇಶಿಸಿ ಮನವೊಲಿಸಲು ಪ್ರಯತ್ನಿಸಿದ್ರು ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನ ಕೆಲ ನಾಯಕರ ಧೋರಣೆ ಬಗ್ಗೆ ಕಿಡಿ ಕಾರಿದ ಕೃಷ್ಣ ಪಕ್ಷದೊಳಗೆ ಎಲ್ಲವೂ ಹದಗೆಟ್ಟಿರುವುದೇ ಈ ನಿರ್ಧಾರಕ್ಕೆ ಕಾರಣ ಅಂತ ಬಹಿರಂಗಪಡಿಸಿದ್ದಾರೆ. ಇಂದು ಬೆಳಿಗ್ಗೆ 11ಕ್ಕೆ ಸೋನಿಯಾಗಾಂಧಿ ಅವರಿಗೆ ತಮ್ಮ ನಿರ್ಧಾರ ತಿಳಿಸಿದ ಕೃಷ್ಣ ಮುಂದಿಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ನಾಳೆ  ಪತ್ರಿಕಾಗೋಷ್ಠಿ ಕರೆದಿರುವ ಎಸ್ ಎಂ ಕೃಷ್ಣ ನಿರ್ಧಾರವನ್ನ ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಮುಖ್ಯಮಂತ್ರಿ, ಕೇಂದ್ರ ಸಚಿವ ಹುದ್ದೆ ಸೇರಿದಂತೆ ಸಾಕಷ್ಟು ಅಧಿಕಾರದ ಸಿಹಿ ಉಂಡ ಎಸ್ ಎಂ ಕೃಷ್ಣ ಈಗ ಅದೇ ಪಕ್ಷಕ್ಕೆರ ಗುಡ್ ಬೈ ಹೇಳಿರುವುದು ತೀರಾ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಫೆಬ್ರುವರಿ 6ರಂದು ಪ್ರಧಾನಿ ಮೋದಿ ಅವರನ್ನ ಎಸ್ ಎಂ ಕೆ ಭೇಟಿ ಮಾಡುವ ಸಾಧ್ಯೆತ ಇದೆ ಎಂದು ಹೇಳಲಾಗುತ್ತಿದೆ. ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು  ಕೃಷ್ಣ ಅವರ ಮುಂದಿನ ನಡೆ ಏನು ಅನ್ನುವದನ್ನ ಕಾಯುವಂತೆ ಮಾಡಿದೆ.

2 thoughts on “ಕಾಂಗ್ರೆಸ್ ಗೆ ಎಸ್ ಎಂ ಕೃಷ್ಣ ಗುಡ್ ಬೈ…

Comments are closed.