ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದೆ ಮತ್ತೊಂದು ಶಾಕಿಂಗ್ ಸುದ್ದಿ

ಸೋಷಿಯಲ್ ಮಿಡಿಯಾಗಳಿರಲಿ, ಗೆಳೆಯರ ಗುಂಪುಗಳಿರಲಿ. ಎಲ್ಲರ ನಡುವೆಯೂ ಚರ್ಚೆ ಹುಟ್ಟುಹಾಕಿರುವ ಒಂದೇ ವಿಷಯವೆಂದ್ರೆ ಈ ಬಾರಿ ಯಾರಾಗಲಿದ್ದಾರೆ ಬಿಗ್ ಬಾಸ್ ವಿನ್ನರ್ ಅನ್ನೋದು. ಮನೆಯೊಳಗೆ ಹೊಕ್ಕ ಮೊದಲ ದಿನದಿಂದಲೂ ಎಲ್ಲರ ಕಣ್ಣಿಗೆ ವಿಚಿತ್ರವಾಗಿ ಕಾಣಿಸಲಾರಂಭಿಸಿದ್ದ ಪ್ರಥಮ್ ಮೇಲೇಯೇ ಎಲ್ಲರ ಕಣ್ಣು ಬೀಳಲಾರಂಭಿಸಿತ್ತು. ತಿಕ್ಕಲು, ತಿಕ್ಕಲು ಆಗಿಯೇ ವರ್ತಿಸುತ್ತಿದ್ದ ಪ್ರಥಮ್ ದಿನ ಕಳೆದು ಬೆಳಗಾಗುವಷ್ಟರಲ್ಲಿ ಕನ್ನಡಿಗರ ಮನೆ ಮಾತಾಗಿ ಬಿಟ್ಟ. ಆತನ ಒಂದೊಂದು ಡೈಲಾಗ್ ಗಳು ಕೂಡಾ ಹುಡುಗರ ಬಾಯಲ್ಲಿ ಹರಿದಾಡಲಾರಂಭಿಸಿದ್ದವು. ಅಷ್ಟರ ಮಟ್ಟಿಗೆ ಪ್ರಥಮ್ ಫೇಮಸ್ ಆಗಿಬಿಟ್ಟ. ಈಗ ಕೊನೆಯದಾಗಿ ಉಳಿದ ಕೀರ್ತಿ, ರೇಖಾ ಮತ್ತು ಪ್ರಥಮ್ ನಡುವೆ ವಿನ್ನರ್ ಯಾರು ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.

ಈ ಕಾರಣಕ್ಕೆ ಇಡೀ ಕರ್ನಾಟಕ ಪ್ರಥಮ್ ವಿನ್ ಆಗಲೆಬೇಕು ಅಂತ ಒಕ್ಕೂರಲಿನಿಂದ ಆಸೆಪಡಲಾರಂಭಿಸಿದೆ. ಆದ್ರೆ ಮೊದ, ಮೊದಲು ಇನ್ನೇನು ಪ್ರಥಮ್ ಟೈಟಲ್ ಗೆದ್ದೇ ಬಿಟ್ಟ ಅನ್ನುವ ಮಾತುಗಳು ಕೇಳಿ ಬಂದಿದ್ವು. ಸೋಷಿಯಾಲ್ ಮೀಡಿಯಾದ ಅಭಿಪ್ರಾಯಗಳಂತೆ ಪ್ರಥಮ್ ಗೆದ್ದರು ಗೆದ್ದಿರಬಹುದು ಅಂತ ವೀಕ್ಷಕರು ಅಂದುಕೊಳ್ಳಲಾರಂಭಿಸಿದ್ರು. ಆದ್ರೆ ಅಷ್ಟರಲ್ಲಾಗಲೇ ಮತ್ತೊಂದು ಶಾಕಿಂಗ್ ನ್ಯೂಸ್ ಬಿಗ್ ಬಾಸ್ ಅಂಗಳದಿಂದ ಹೊರಬಿದ್ದಿದೆ. ಪ್ರತಿ ಬಾರಿಯೂ ವಿನ್ನರ್ ವಿಷಯದಲ್ಲಿ ಚಾನೆಲ್ ನಡೆ ಪ್ರಶ್ನಾರ್ಹ ವಾಗಿದ್ದರು ಈ ಬಾರಿ ಆರೀತಿ ಆಗಲಿಕ್ಕಿಲ್ಲ ಅಂತಲೇ ವೀಕ್ಷಕರು ಬಲವಾಗಿ ನಂಬಿದ್ದರು. ವಾಟ್ಸಪ್ ನಲ್ಲಿ ಪ್ರಥಮ್ ಗೆ 9 ಲಕ್ಷ ಓಟ್ ಬಂದಿದೆ ಅಂತ ಅಂಕಿ ಸಂಖ್ಯೆಗಳು ಕೂಡಾ ಹರಿದಾಡಲಾರಂಬಿಸಿದವು. ಆದ್ರೆ ಈಗ ಆ ಸುದ್ದಿಯೇ ಸುಳ್ಳು ಅನ್ನುವ ಮಾತು ಕೇಳಿಸಲಾರಂಭಿಸಿದೆ.

ಬಿಗ್ ಬಾಸ್ ನ ವಿನ್ನರ್ ವಿಷಯದಲ್ಲಿ ಈ ಸಾರಿಯೂ ಚಾನೆಲ್ ವಿಭಿನ್ನ ನಡೆ ಇಟ್ಟಿದೆ ಅಂತ ಹೇಳಲಾಗ್ತಿದೆ. ವೀಕ್ಷಕರು ಊಹಿಸಿದವರನ್ನ ಚಾನೆಲ್ ಕಳೆದ ಮೂರು ಸೀಜನ್ ನಲ್ಲಿಯೂ ರನ್ನರ್ ಅಪ್ ಆಗಿಯೇ ಆಯ್ಕೆ ಮಾಡಿದೆ. ಸೀಜನ್ 1ರಲ್ಲಿ ಅರುಣ್ ಸಾಗರ್ ಗೆದ್ದೇ ಬಿಟ್ಟ ಅಂದುಕೊಂಡಾಗ ತೀರಾ ಸಪ್ಪೆಯಾಗಿ ಆಡಿದ್ದ ವಿಜಯ್ ರಾಘವೇಂದ್ರ ವಿಜಯಿ ಅಂತ ಘೋಷಣೆಯಾಗಿದ್ದರು. ಸೀಜನ್ 2ರಲ್ಲಿ ಸೃಜನ್ ಸೂಪರ್ ಆಗಿ ಆಡಿದ್ದರು ಕೂಡಾ ಚಾನೆಲ್ ಘೋಷಿಸಿದ ವಿನ್ನರ್ ಅಕುಲ್ ಬಾಲಾಜಿ. ಅದರಂತೆ ಸೀಜನ್ 3ರಲ್ಲಿ ಮಾ.ಆನಂದ್ ಅದ್ಭುತವಾಗಿ ಆಡಿ ವೀಕ್ಷಕರ ಹಾಟ್ ಫೇವರೇಟ್ ಆಗಿದ್ದಾಗಲೇ ಶೃತಿ ಅವರು ಗೆದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.

ಹೀಗೆ ಚಾನೆಲ್ ವೀಕ್ಷಕರು ಅಂದುಕೊಂಡ ಯಾವೊಬ್ಬ ಸ್ಪರ್ಧಿಯನ್ನು ಇಲ್ಲಿಯವರೆಗೆ ಗೆಲ್ಲಿಸಿಯೇ ಇಲ್ಲ. ಹೀಗಾಗಿ ಈ ಬಾರಿಯೂ ಅದೇ ಚಾಳಿ ರೀಪಿಟ್ ಆಗಲಿದೆ ಅನ್ನಲಾಗುತ್ತಿದೆ. ಈ ಕಾರಣಕ್ಕೆ ರೇಖಾ ಬಿಗ್ ಬಾಸ್ ಸೀಜನ್ 4ರ ವಿನ್ನರ್ ಎಂದು ಸುದ್ದಿ ಹಬ್ಬಿದೆ. ಇದು ನಿಜವೇ ಆದ್ರೆ ಈ ಬಾರಿ ವೀಕ್ಷಕರು ಚಾನೆಲ್ ನ ನಿರ್ಧಾರದ ಬಗ್ಗೆ ಸಾಕಷ್ಟು ಅನುಮಾನ ಹಾಗೂ ಬೇಸರ ಪಡುವುದಂತು ಸತ್ಯ. ಹಾಗೆ ಆಗಬಾರದು ಅಂತಾದ್ರೆ ಪ್ರಥಮ್ ವಿನ್ ಆಗಲೆಬೇಕು ಅನ್ನೋದು ಇಡೀ ಕನ್ನಡಿಗರ ಆಸೆ. ಯಾಕಂದ್ರೆ ಇದು ಕನ್ನಡಿಗರ ಗೆಲುವು. ಕಿಚ್ಚ ಸುದೀಪ್ ಅವರ ಗೆಲುವು.

5 thoughts on “ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದೆ ಮತ್ತೊಂದು ಶಾಕಿಂಗ್ ಸುದ್ದಿ

 • October 20, 2017 at 9:59 PM
  Permalink

  What would be your next topic next week on your blog.”\”–,

 • October 21, 2017 at 4:16 AM
  Permalink

  Hey there, I think your site might be having browser compatibility issues.

  When I look at your blog site in Safari, it looks fine but when opening in Internet
  Explorer, it has some overlapping. I just wanted to give you a
  quick heads up! Other then that, superb blog!

 • October 24, 2017 at 3:27 PM
  Permalink

  I needed to thank you for this good read!! I certainly loved every little bit of it.

  I’ve got you saved as a favorite to check out new things you post…

Comments are closed.