ಸಹೋದ್ಯೊಗಿ ಮಾಡಿದ ತಪ್ಪಿಗೆ ದಂಡ ತೆತ್ತ ಬೋಲ್ಟ್!

ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರಿಗೆ ಬುಧವಾರ ಶಾಕ್. ಒಲಿಂಪಿಕ್ಸ್‌ನಲ್ಲಿ ಟ್ರಿಪಲ್ ಟ್ರಿಪಲ್ ಸಾಧನೆ ಮಾಡಿದ ವೀರ ಬೋಲ್ಟ್, ಸಹೋದ್ಯೊಗಿ ಮಾಡಿದ ತಪ್ಪಿಗೆ ದಂಡ ತೆತ್ತಿದ್ದಾರೆ.

2008 ರ ಬೀಜಿಂಗ್ ಒಲಿಂಪಿಕ್ಸ್‌ ನಲ್ಲಿ ಉಸೇನ್ ಬೋಲ್ಟ್ ಮುಂದಾಳತ್ವದಲ್ಲಿ ಜಮೈಕಾ ತಂಡ 4*100 ಮೀ. ರಿಲೆಯಲ್ಲಿ 37.10 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ವಿಶ್ವದಾಖಲೆ ಸ್ವರ್ಣ ಪದಕ ಗೆದ್ದುಕೊಂಡಿತ್ತು. ಆ ನಾಲ್ಕು ಓಟಗಾರರ ಪೈಕಿ ಓರ್ವ ಅಥ್ಲೀಟ್ ನೆಸ್ಟಾ ಕಾರ್ಟರ್ ನಿಷೇಧಿತ ಉದ್ದೀಪನ ಮದ್ದು ಸೇವಿಸಿ ರುವುದು ವೈದ್ಯಕೀಯ ತಪಾಸಣೆಯಲ್ಲಿ ಧೃಡ ಪಟ್ಟಿದೆ. ಇದರಿಂದಾಗಿ ತಂಡ ಗೆದ್ದ ಚಿನ್ನದ ಪದಕವನ್ನು ಒಲಿಂಪಿಕ್ಸ್ ಸಂಸ್ಥೆ ಹಿಂಪಡೆದು ಕೊಂಡಿದೆ.

ಉಸೇನ್ ಬೋಲ್ಟ್ ಮೂರು ಒಲಿಂಪಿಕ್ಸ್‌ ಗಳಲ್ಲಿ ಮೂರು ಚಿನ್ನದ ಪದಕ ಪಡೆದು ಬೀಗಿದ್ದರು. ಬೋಲ್ಟ್ ವೈಯಕ್ತಿಕವಾಗಿ 100 ಮೀ., 200 ಮೀ., ಓಟದಲ್ಲಿ ಚಿನ್ನದ ನಗೆ ಬೀರಿದ್ದರು. ಅಲ್ಲದೆ ರೀಲೆಯಲ್ಲೂ ಅವರು ಮೂರೂ ಒಲಿಂಪಿಕ್ಸ್‌ ಗಳಲ್ಲಿ ಚಿನ್ನ ಕೊರಗಳಿಗೆ ಹಾಕಿ ಕೊಂಡಿದ್ದರು. ಸಹೋದ್ಯೋಗಿ ಮಾಡಿದ ಎಡವಟ್ಟಿನಿಂದ ಬೋಲ್ಟ್ ಒಂದು ಚಿನ್ನ ಕೈ ತಪ್ಪಿದೆ.

Comments are closed.

Social Media Auto Publish Powered By : XYZScripts.com