ಈಶ್ವರಪ್ಪ ಬಿಜೆಪಿ ಪಕ್ಷದ ನಿಷ್ಠಾವಂತ ವ್ಯಕ್ತಿ!

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಬೆಂಬಲಿಗರು ಈಶ್ವರಪ್ಪನವರು ಜೆಡಿಎಸ್ ಗೆ ಹೋಗುತ್ತಿದ್ದಾರೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಈಶ್ವರಪ್ಪನವರು ನನಗೆ ತಿಳಿದ ಹಾಗೆ ಬಿಜೆಪಿಯ ನಿಷ್ಠಾವಂತ ವ್ಯಕ್ತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಈಶ್ವರಪ್ಪನವರು ನನಗೆ ತಿಳಿದಂತೆ ಬಿಜೆಪಿಯ ನಿಷ್ಠಾವಂತ ವ್ಯಕ್ತಿ. ಅವರು ಜೆಡಿಎಸ್ ಗೆ ಹೋಗುತ್ತಿದ್ದಾರೆ ಎಂದು ಯಡಿಯೂರಪ್ಪನವರ ಬೆಂಬಲಿಗರು ವದಂತಿ ಹರಡಿಸುತ್ತಿದ್ದಾರೆ ಇವತ್ತು ಯಾರು ಈಶ್ವರಪ್ಪನವರನ್ನು ಪಕ್ಷದಿಂದ ಹೊರಗಡೆ ಹಾಕಬೇಕೆಂದು ಕೊಂಡಿದ್ದಾರೋ ಅವರೇ ಹತ್ತು ವಷ೯ಗಳ ಹಿಂದೆಯೇ ಬಿಜೆಪಿ ಬಿಡಲು ನಿಧ೯ರಿಸಿದ್ದರು  ಎಂದು ಪರೋಕ್ಷವಾಗಿ ಯಡಿಯೂರಪ್ಪನವರಿಗೆ ಟಾಂಗ್ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದವೂ ಹರಿಹಾಯ್ದ ಕುಮಾರಸ್ವಾಮಿ, ಗ್ರಾಮೀಣ ಜನರ ಬದುಕಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ಸಿ.ಎಂ ಇಂದು ಮ್ಯೆಸೂರಿನಲ್ಲಿ ನೀರಿನ ವಿಚಾರವಾಗಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದಾಗಿ ಹರಿಹಾಯ್ದಿದ್ದಾರೆ. ಮುಖ್ಯಮತ್ರಿಗಳೇ ಮೊದಲು ಹಣ ಬಿಡುಗಡೆ ಮಾಡಿ ನಂತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಿ ಹಣ ಬಿಡುಗಡೇ ಮಾಡದೇ ನೀರು ಬಿಡಿ ಎಂದರೆ ಅವರೆಲ್ಲಿಂದ ನೀರು ಬಿಡಬೇಕು. ಕೇಂದ್ರ ಸರ್ಕಾರ ಕೂಡಾ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ. ಭಾರತದ ಭೂಪಟದಲ್ಲಿ ಕನಾ೯ಟಕ ಇದಿಯಾ ಇಲ್ಲವಾ ಎನ್ನುವುದನ್ನು ಪ್ರಧಾನಿ ಮರೆತಂತಿದೆ ಎಂದರು.

Comments are closed.