ಪೋಸ್ಟರ್ ನಲ್ಲೇ ಗಣರಾಜ್ಯೋತ್ಸವ ಮುಗಿಸಿದ ರಾಜಮೌಳಿ!

ಬಾಹುಬಲಿ ದಿ ಕನ್ ಕ್ಲ್ಯೂಷನ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. ಸ್ವತಃ ನಿರ್ದೇಶಕ ರಾಜಮೌಳಿ ಇಂದು ಬಾಹುಬಲಿ ಪಾರ್ಟ್ 2 ಚಿತ್ರದ ಹೊಸ ಪೋಸ್ಟರ್ ಸ್ಟಿಲ್ಸ್ ಅನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮರೇಂದ್ರ ಬಾಹುಬಲಿ, ದೇವಸೇನಾ ಬಿಲ್ಲಿಡಿದು ಬಾಣ ಹೂಡುತ್ತಿರುವ ಈ ಸ್ಟಿಲ್ಸ್ ಮೊದಲ ನೋಟದಲ್ಲೇ ಗಮನ ಸೆಳೆಯುವಂತಿದೆ.

ಈ ಹಿಂದೆ ಶಾರುಖ್ ಖಾನ್ ಅಭಿನಯದ ‘ರಯೀಸ್’ ಚಿತ್ರದ ಜೊತೆಗೆ ಬಾಹುಬಲಿ ದಿ ಕನ್ ಕ್ಲ್ಯೂಷನ್ ಚಿತ್ರದ ಟೀಸರ್ ರಿಲೀಸ್ ಆಗುತ್ತೆ ಅಂತ ಸುದ್ದಿಯಾಯ್ತು. ಆ ನಂತ್ರ ಆ ಸುದ್ದಿ ಸುಳ್ಳು ಅಂತ ಗೊತ್ತಾಯ್ತು. ಗಣರಾಜ್ಯೋತ್ಸವದ ಉಡುಗೊರೆಯಾಗಿ ಚಿತ್ರದ ಟೀಸರ್ ರಿವೀಲ್ ಆಗತ್ತೆ ಅಂದುಕೊಂಡಿದ್ದ ಅಭಿಮಾನಿಗಳಿಗೂ ಇದೀಗ ನಿರಾಸೆಯಾಗಿದೆ. ಕೇವಲ ಇದೊಂದು ಸ್ಟಿಲ್ ಬಿಡುಗಡೆ ಮಾಡಿ ರಾಜಮೌಳಿ ಗಣರಾಜ್ಯೋತ್ಸವ ಮುಗಿಸಿದಂತೆ ಕಾಣ್ತಿದೆ ಅಂತ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಅದೆಲ್ಲಾ ಏನೇ ಇದ್ರೂ ಹೊಸ ಪೋಸ್ಟರ್ ಅಭಿಮಾನಿಗಳಿಗೆ ಇಷ್ಟವಾಗಿರೋದು ಸುಳ್ಳಲ್ಲ. ಅದರ ಜೊತೆಗೆ ಟೀಸರ್ಗಾಗಿ ಇನ್ನಷ್ಟು ದಿನ ಕಾಯೋದು ಅನಿವಾರ್ಯ ಅನ್ನುವಂತಾಗಿದೆ. ಅಂದ ಹಾಗೆ ಈ ಬಹುತಾರಾಗಣದ ಬಹುಕೋಟಿ ವೆಚ್ಚದ ಚಿತ್ರ ಏಪ್ರಿಲ್ 28ಕ್ಕೆ ತೆರೆಗಪ್ಪಳಿಸಲಿದೆ.

Comments are closed.