ಫುಟ್ವಾಲ್: ಸ್ಟೂಡೆಂಟ್ ತಂಡಕ್ಕೆ ಜಯ

ಭರ್ಜರಿ ಆಟದ ಪ್ರದರ್ಶನ ನೀಡಿದ ಸ್ಟೂಡೆಂಟ್ ಫುಟ್ಬಾಲ್ ತಂಡ ಬೆಂಗಳೂರಿನಲ್ಲಿ ನಡೆದ ಸೂಪರ್ ಡಿವಿಜನ್ ಟೂರ್ನಿಯಲ್ಲಿ ಜಯ ಸಾಧಿಸಿದೆ.
ನಗರದ ಅಶೋಕ ನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಟೂಡೆಂಟ್ 2-0 ಗೋಲುಗಳಿಂದ ಡಿವೈಇಎಸ್ ತಂಡದ ವಿರುದ್ಧ ಜಯ ಸಾಧಿಸಿತು. ಸ್ಟೂಡೆಂಟ್ ಪರ ಎಮ್ಮನ್ಯೂಲ್ (6ನೇ ನಿಮಿಷ), ಪ್ರವೀಣ್ (45+2ನೇ ನಿಮಿಷ) ಗೋಲು ದಾಖಲಿಸಿದರು.
ಮೊದಲಾವಧಿಯ ಆಟದಲ್ಲಿ ಎದುರಾಳಿ ತಂಡದ ರಕ್ಷಣಾ ವಿಭಾಗದ ಮೇಲೆ ಆಕ್ರಮಕಾರಿ ಆಟ ಆಡಿದ ಸ್ಟೂಡೆಂಟ್, ಈ ಅವಧಿಯಲ್ಲಿ ಗೋಲು ಬಾರಿಸುವ ಆಸೆ ಫಲಿಸಿತು. ಆರಂಭದಲ್ಲಿ ಒಂದು ಗೋಲು ದಾಖಲಿಸಿದ ಸ್ಟೂಡೆಂಟ್, ಅವಧಿಯ ಅಂತ್ಯದಲ್ಲಿ ಮತ್ತೊಂದು ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿತು.
ಎರಡನೇ ಅವಧಿಯಲ್ಲಿ ಉಭಯ ತಂಡಗಳು ಗೋಳು ಬರವನ್ನು ಅನುಭವಿಸಿದವು. ಪರಿಕ್ರಮ್‌ಗೆ ಜಯ ಎ ಡಿವಿಜನ್ ಟೂರ್ನಿಯಲ್ಲಿ ಪರಿಕ್ರಮ ತಂಡ 2-1 ಗೋಲುಗಳಿಂದ ಆದಾಯ ತೆರಿಗೆ ತಂಡದ ವಿರುದ್ಧ ಗೆಲುವು ದಾಖಲಿಸಿತು. ಪರಿಕ್ರಮ ತಂಡದ ಪರ ತಂಗ್‌ಮೊಂಗ್ (23ನೇ ನಿಮಿಷ), ಚಿರಂಜೀವ್ (29ನೇ ನಿಮಿಷ) ಅಂಕಗಳಿಸುವಲ್ಲಿ ಸಫಲರಾದರು. ಕಳೆದ ವರ್ಷ ಬಿ ಡಿವಿಜನ್ ಟೂರ್ನಿಯಲ್ಲಿ ಜಯ ಸಾಧಿಸಿ ಎ ಡಿವಿಜನ್‌ಗೆ ಬಡ್ತಿ ಪಡೆದಿದ್ದ ಪರಿಕ್ರಮ ಉತ್ತಮ ಆಟವನ್ನು ಆಡಿತು.

Comments are closed.