ಪ್ರಥಮ ಸೋಲಿನಲ್ಲಿ ಬೆಂಗಳೂರು ಫುಟ್ಬಾಲ್ ತಂಡ

ಸತತ ಮೂರು ಜಯ ಸಾಧಿಸಿ, ಹ್ಯಾಟ್ರಿಕ್ ನಗೆ ಬೀರಿದ್ದ ಬೆಂಗಳೂರು ಫುಟ್ಬಾಲ್ ತಂಡ ಕೊಲ್ಕತ್ತಾದಲ್ಲಿ ನಡೆದ ಐ-ಲೀಗ್ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.
ಬರಸಾತ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ 1-2 ಗೋಲುಗಳಿಂದ ಈಸ್ಟ್ ಬೆಂಗಾಲ್ ತಂಡದ ವಿರುದ್ಧ ನಿರಾಸೆ ಅನುಭವಿಸಿತು. ಬೆಂಗಳೂರು ಪರ ಸಿ.ಕೆ ವಿನೀತ್ (23ನೇ ನಿಮಿಷ) ಗೋಲು ದಾಖಲಿಸಿದರೆ, ಇವಾನ್ ಬುಕ್ನೇಯಾ (28ನೇ ನಿಮಿಷ), ರಾಬಿನ್ ಸಿಂಗ್ (79ನೇ ನಿಮಿಷ) ಗೋಲು ದಾಖಲಿಸಿ ಜಯದಲ್ಲಿ ಮಿಂಚಿದರು.
ಹಾಲಿ ಚಾಂಪಿಯನ್ ಬೆಂಗಳೂರು ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಜಯ, 1 ಸೋಲು ಸಾಧಿಸಿದ್ದು, 9 ಅಂಕ ಕಲೆ ಹಾಕಿ ಮೂರನೇ ಸ್ಥಾನದಲ್ಲಿದೆ. ಈಸ್ಟ್ ಬೆಂಗಾಲ್ ತಂಡ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಪಂದ್ಯದ  23 ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿ ತಂಡದ ಸಿ.ಕೆ.ವಿನೀತ್, ಗೋಲು ಗಳಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಇದು ಪ್ರಸಕ್ತ ಟೂರ್ನಿಯಲ್ಲಿ ವಿನೀತ್ ಗಳಿಸಿದ ಐದನೇ ಗೋಲು.
ಮುಂದೆ ಐದು ನಿಮಿಷಗಳ ನಂತರ ಈಸ್ಟ್ ಬೆಂಗಾಲ್ ತಂಡದ ಇವಾನ್ ಬುಕೇನಾ ಗೋಲು ಬಾರಿಸಿ ಪಂದ್ಯವನ್ನು 1-1 ರಿಂದ ಸಮಸ್ಥಿತಿಗೆ ತರುವಲ್ಲಿ ಯಶಸ್ಸಿಯಾದರು. ವಿರಾಮದ ವೇಳೆಗೆ ಪಂದ್ಯ 1-1 ರಿಂದ ಸಮಸ್ಥಿಗೆ ಇತ್ತು.
ವಿರಾಮದ ನಂತರ ಉಭಯ ತಂಡಗಳ ಆಟಗಾರರು ಗೋಲು ಗಳಿಸಲು ತೀವ್ರ ಯತ್ನ ನಡೆದಿರೂ ಯಶ ಕಾಣದೇ ಹೋದರು. ಪಂದ್ಯದ 79 ನೇ ನಿಮಿಷದಲ್ಲಿ ರಾಬಿನ್ ಸಿಂಗ್ ತಾವು ಹಿಂದೆ ಪ್ರತಿನಿಧಿಸುತ್ತಿದ್ದ ಬೆಂಗಳೂರು ತಂಡದ ಆಟಗಾರರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ತಳ್ಳುವ ಮೂಲಕ ತಂಡಕ್ಕೆ ಜಯದ ಗೋಲನ್ನು ತಂದಿತ್ತರು.

One thought on “ಪ್ರಥಮ ಸೋಲಿನಲ್ಲಿ ಬೆಂಗಳೂರು ಫುಟ್ಬಾಲ್ ತಂಡ

Comments are closed.

Social Media Auto Publish Powered By : XYZScripts.com