ಬೃಹತ್ ಮೊತ್ತದತ್ತ ದಾಪು ಗಾಲಿಟ್ಟ ಗುಜರಾತ್

ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ ರಾಜಸ್ಥಾನ ತಂಡ ಎರಡನೇ ಇನಿಂಗ್ಸ್‌ನಲ್ಲೂ ಗುಜರಾತ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾಗಿದ್ದು, ಪಾರ್ಥಿವ್ ಪಟೇಲ್ ಪಡೆ ಬೃಹತ್ ಮೊತ್ತದತ್ತ ದಾಪು ಗಾಲು ಇಟ್ಟಿದೆ.
ಭಾನುವಾರ ಮುಂಬೈನಲ್ಲಿ ನಡೆದ ಮೂರನೇ ದಿನದಾಟದಲ್ಲಿ 9 ವಿಕೆಟ್‌ಗೆ 206 ರನ್‌ಗಳಿಂದ ಆಟ ಮುಂದುವರಿಸಿದ ಶೇಷ ಭಾರತ ತಂಡ 226 ರನ್‌ಗಳಿಗೆ ಆಲೌಟ್ ಆಯಿತು. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ರಣಜಿ ಚಾಂಪಿಯನ್ ಗುಜರಾತ್ ತಂಡ ದಿನದಾಟದ ಅಂತ್ಯಕ್ಕೆ 8 ವಿಕೆಟ್‌ಗೆ 227 ರನ್ ಕಲೆ ಹಾಕಿದೆ.
ಸೋಮವಾರ ಆಟದಲ್ಲಿ ಗುಜರಾತ್ ತಂಡವನ್ನು ಬೇಗನೆ ಕಟ್ಟಿ ಹಾಕುವ ಲೆಕ್ಕಾಚಾರ ಶೇಷ ಭಾರತ ತಂಡದ್ದಾಗಿದೆ. ಇನ್ನು ಗುಜರಾತ್ ತಾಳ್ಮೆಯ ಇನಿಂಗ್ಸ್ ಕಟ್ಟಿ, ಸವಾಲಿನ ಮೊತ್ತ ನೀಡುವ ಇರಾದೆ ಹೊಂದಿದೆ.
ಎರಡನೇ ಇನಿಂಗ್ಸ್ ಆರಂಭಿಸಿದ ಪಾರ್ಥಿವ್ ಪಡೆ ಆರಂಭ ಕಳಪೆಯಾಗಿತ್ತು. ಆರಂಭಿಕ ಸಮಿತ್ (1), ಮಧ್ಯಮ ಕ್ರಮಾಂಕದ ಧ್ರುವ್ ರಾವಲ್ (23) ರನ್ ಕಲೆ ಹಾಕಲಿಲ್ಲ. ಮೂರನೇ ವಿಕೆಟ್‌ಗೆ ಪ್ರಿಯಾಂಕ್ ಪಾಂಚಾಲ್ ಹಾಗೂ ನಾಯಕ ಪಾರ್ಥಿವ್ (32) ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು. ಈ ಜೋಡಿ ತಂಡಕ್ಕೆ 85 ರನ್ ಜೊತೆಯಾಟ ನೀಡಿತು. ಉಳಿದಂತೆ ದೊಡ್ಡ ಜೊತೆಯಾಟ ಕಂಡುಬರಲಿಲ್ಲ.
ರಣಜಿಯಲ್ಲಿ ಸಹಸ್ರ ರನ್ ಕಲೆ ಹಾಕಿದ ಪ್ರಿಯಾಂಕ್ 135 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 73 ರನ್ ಬಾರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಶತಕ ಸಾಧನೆಯನ್ನು ಮಾಡಿರುವ ಚಿರಾಗ್ ಗಾಂಧಿ 7 ಬೌಂಡರಿ ಒಳಗೊಂಡ 55 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶೇಷ ಭಾರತ ತಂಡದ ಪರ ಶಹಭಾಜ್ ನದೀಮ್ 53 ರನ್‌ಗೆ ೪ ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಗುಜರಾತ್ ಮೊದಲ ಇನಿಂಗ್ಸ್ 358
ಶೆಷ ಭಾರತ ಮೊದಲ ಇನಿಂಗ್ಸ್ 226
ಗುಜರಾತ್ ದ್ವಿತೀಯ ಇನಿಂಗ್ಸ್ 8 ವಿಕೆಟ್‌ಗೆ 227

Comments are closed.

Social Media Auto Publish Powered By : XYZScripts.com