ನೋಟ್ ಬ್ಯಾನ್ ಮತ್ತೆ ಆಗುತ್ತಾ? ಈ ಸ್ಟೋರಿ ನೋಡಿ

ಮುಂಬರುವ 2019 ರ ಚುನಾವಣೆಗಗೂ ಮುನ್ನ ಕೇಂದ್ರ ಸರ್ಕಾರ ಎರಡು ಸಾವಿರ ರು. ನೋಟನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು  ನವೆಂಬರ್ 8 ರಂದು  ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ಯೋಜನೆಯ ಸಲಹೆಗಾರ ಅನಿಲ್ ಬೊಕಿಲ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ನೋಟು ನಿಷೇಧ ಯೋಜನೆಯ ಸಲಹೆಗಾರ ಅನಿಲ್ ಬೊಕಿಲ್‌, ದೇಶದಲ್ಲಿ 500-1000 ಮುಖಬೆಲೆಯ ನೋಟ್‌ ನಿಷೇಧಕ್ಕೆ ತಾತ್ಕಾಲಿಕ ಪರಿಹಾರವಾಗಿ ಹೊಸ 2 ಸಾವಿರ ಮುಖಬೆಲೆಯ ನೋಟ್‌ ಮುದ್ರಣ ಮಾಡಲಾಗುತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ 2ಸಾವಿರ ರು. ನೋಟು ನಿಷೇಧ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ನಗದು ರಹಿತ ಆರ್ಥಿಕ ವ್ಯವಸ್ಥೆ ಕೇಳಲು ಸುಂದರ ಎನಿಸಬಹುದು, ಆದರೆ ಅದನ್ನು ಪ್ರಾಯೋಗಿಕವಾಗಿ ಭಾರತದಲ್ಲಿ ಜಾರಿ ಮಾಡಬಹುದು ಕಷ್ಟದ ಕೆಲಸ, ಏಕೆಂದರೆ ಭಾರತದಲ್ಲಿರುವ ಅತಿ ಹೆಚ್ಚಿನ ಪ್ರಮಾಣದ ಜನಸಂಖ್ಯೆ ಅನಕ್ಷರಸ್ಥರಾಗಿದ್ದಾರೆ. ಜೊತೆಗೆ ಬಡತನ ರೇಖೆಗಿಂತ ಕೆಳಗಿದ್ದಾರೆ. ಹೀಗಾಗಿ ನಗದು ರಹಿತ ವ್ಯವಹಾರ ಎಂಬುದು ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಯಾಗಲು ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಬಡತನ ರೇಖೆಗಿಂತ ಕೆಳಗಿರುವವರು, 50 ಹಾಗೂ 100 ರು ಗಿಂತ ಹೆಚ್ಚಿಗೆ ಖರ್ಚು ಮಾಡಲು ಸಾಧ್ಯವಿಲ್ಲ, 50 ಮತ್ತು 100 ರು ನೋಟುಗಳಿಂದ ಅವರ ವ್ಯಾಪಾರ ವಹಿವಾಟಿಗೆ ಸಾಕಾಗಿರುತ್ತದೆ ಎಂದು ತಿಳಿಸಿದ್ದಾರೆ.

ನೋಟ್ ಬ್ಯಾನ್ ನಿಂದ ಸಾರ್ವಜನಿಕರು ಇತ್ತೀಚಿಗೆ ಸ್ವಲ್ಪ ರೀಲಾಕ್ಸ್ ಅನ್ನು ಪಡೆಯುತ್ತಿದ್ದು ಮುಂಬರುವ ಲೋಕಸಭೆ ಚುನಾವಣಾ ವೇಳೆಯಲ್ಲಿ ಯಾವ ರೀತಿ ನೋಟ್ ಬ್ಯಾನ್ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತಾ..? ಅಥವಾ ನೋಟ್ ಬ್ಯಾನ್ ಮಾಡಲ್ವಾ ಎಂಬುದನ್ನು ಕಾದು ನೋಡಬೇಕಾಗಿದೆ.

2 thoughts on “ನೋಟ್ ಬ್ಯಾನ್ ಮತ್ತೆ ಆಗುತ್ತಾ? ಈ ಸ್ಟೋರಿ ನೋಡಿ

 • October 20, 2017 at 9:29 PM
  Permalink

  Right now it seems like WordPress is the preferred blogging platform out there right now. (from what I’ve read) Is that what you are using on your blog?|

 • October 21, 2017 at 12:52 AM
  Permalink

  Howdy! Would you mind if I share your blog with my facebook group?
  There’s a lot of folks that I think would really appreciate
  your content. Please let me know. Cheers

Comments are closed.