ಜಾದವ್ ಹೋರಾಟ ವ್ಯರ್ಥ: ವೈಟ್ ವಾಶ್ ನಿಂದ ಪಾರಾದ ಇಂಗ್ಲೆಂಡ್

ಕೊನೆಯ ಕ್ಷಣದವರೆಗೂ ಚಂಚಲೆಯಾಗಿದ್ದ ವಿಜಯಲಕ್ಷ್ಮೀ ಇಂಗ್ಲೆಂಡ್ ಪರ ವಾಲಿದ್ದಾಳೆ. ಕೊಲ್ಕತ್ತಾದಲ್ಲಿ ನಡೆದ ರೋಚಕ ಪಂದ್ಯವನ್ನು ಸೋತ ಭಾರತ ಟೂರ್ನಿಯಲ್ಲಿ ಮೊದಲ ನಿರಾಸೆ ಅನುಭವಿಸಿದರೂ, ಮೂರು ಏಕದಿನ ಸರಣಿಯನ್ನು 2-1 ರಿಂದ ಗೆಲ್ಲುವಲ್ಲಿ ಸಫಲವಾಗಿದೆ.
ಭಾನುವಾರ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಕೊನೆಯ ಓವರ್‌ಗೆ ಗೆಲ್ಲಲು 6 ಎಸೆತಗಳಲ್ಲಿ 16 ರನ್ ಅವಶ್ಯಕ ಇತ್ತು. ಯುವ ಆಟಗಾರ ಕೇದಾರ್ ಜಾದವ್ ಮೊದಲ ಎಸೆತದಲ್ಲಿ ಸಿಕ್ಸ್, ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವಿನ ಕನಸು ಚಿಗುರಿಸಿದರು. ಆದರೆ ಕೊನೆಯ ಕ್ಷಣದವರೆಗೂ ಸೊಲೊಪ್ಪದ ಇಂಗ್ಲೆಂಡ್ ಕರಾರುವಕ್ ದಾಳಿ ನಡೆಸಿ ಜಯದ ಮಾಲೆಯನ್ನು ಹಾಕಿಕೊಂಡಿತು. ಈ ಮೂಲಕ ಪ್ರವಾಸದಲ್ಲಿ ಮೊದಲ ಜಯ ದಾಖಲಿಸಿತು.
ಟಾಸ್ ಸೋತರೂ, ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 321 ರನ್ ಕಲೆ ಹಾಕಿತು. ಸವಾಲಿನ ಮೊತ್ತ ಹಿಂಬಾಲಿಸಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 316 ರನ್ ಸೇರಿಸಿ ಸೋಲು ಕಂಡಿತು.
ಮೊದಲೇರಡೂ ಪಂದ್ಯಗಳನ್ನು ಗೆದ್ದು ಕೊಂಡಿದ್ದ ಭಾರತ ಸರಣಿಯನ್ನು ವಶಕ್ಕೆ ಪಡಿಯಿತು.ಮೂರನೇ ಪಂದ್ಯದಲ್ಲಿ ಭಾರತದ ಆರಂಭಿಕರಾದ ಅಜಿಂಕ್ಯ ರಹಾನೆ (1) ಕನ್ನಡಿಗ ಕೆ.ಎಲ್ ರಾಹುಲ್ (11) ರನ್ ಬರವನ್ನು ಅನುಭವಿಸಿದರು.
 
ವಿರಾಟ್-ಯುವಿ ಜೊತೆಯಾಟದಲ್ಲಿ ಯುವಿ ಎರಡನೇ ಪಂದ್ಯದ ಹೀರೋ ಭಾರತವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಜೋಡಿ 65 ರನ್ ಜೊತೆಯಾಟವನ್ನು ನೀಡಿತು. ಯುವರಾಜ್ ದೊಡ್ಡ ಇನಿಂಗ್ಸ್ ಕಟ್ಟದೇ ಇದ್ದರೂ, ಮತ್ತೊಮ್ಮೆ ಎಲ್ಲರ ಮನಸ್ಸು ಗೆದ್ದರು.
ನಾಯಕ ಮಹೇಂದ್ರ ಸಿಂಗ್ ಧೋನಿ (25) ಒತ್ತಡವನ್ನು ಮೆಟ್ಟಿ ನಿಲ್ಲಲಿಲ್ಲ. ಹಾರ್ದಿಕ್-ಕೇದಾರ್ ಜುಗಲ್‌ಬಂಧಿ ಮಧ್ಯಮ ಕ್ರಮಾಂಕದ ಕೇದಾರ್ ಜಾದವ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಂಗ್ಲರ ಬೌಲರ್‌ಗಳಿಗೆ ಕಾಡಿದರು. 13.5 ಓವರ್‌ಗಳಲ್ಲಿ 7.51 ರ ಸರಾಸರಿಯಲ್ಲಿ ಜೋಡಿ 104 ರನ್ ಕಲೆ ಹಾಕಿ, ಗೆಲುವಿನ ಆಸೆ ಚಿಗುರಿಸಿತು. ಹಾರ್ದಿಕ್ 4 ಬೌಂಡರಿ, 2 ಸಿಕ್ಸರ್ ಒಳಗೊಂಡಂತೆ 56 ರನ್ ಬಾರಿಸಿದರು.
ಕೇದಾರ್ ಜಾದವ್ ಮೂರನೇ ಪಂದ್ಯದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಕೇದಾರ್, ಭಾರತೀಯ ಅಭಿಮಾನಿಗಳ ಮನ ಗೆದ್ದರು. ಆಕರ್ಷಕ ಆನ್ ಡ್ರೈವ್, ಅಪರ್ ಕಟ್, ಸಿಕ್ಸರ್‌ಗಳ ಮೂಲಕ ಕೋಲ್ಕೊತಾ ಜನರಿಗೆ ರಸಗುಲ್ಲಾ ತಿನಿಸಿದರು. ಸೊಗಸಾದ ಆಟವಾಡಿದ ಕೇದಾರ್ 12 ಬೌಂಡರಿ, 1 ಸಿಕ್ಸರ್ ನೆರವಿನಿಂದ 90 ರನ್ ಸಿಡಿಸಿ ಔಟಾದರು.
 
ಉತ್ತಮ ಆರಂಭ ಇದಕ್ಕೂ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಜಾಸನ್ ರಾಯ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ (35) ಮೊದಲ ವಿಕೆಟ್‌ಗೆ ೯೮ ರನ್‌ಗಳ ಜೊತೆಯಾಟ ನೀಡಿದರು.
ರಾಯ್ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 65 ರನ್ ಸೇರಿಸಿದರು. ಮೂರನೇ ವಿಕೆಟ್‌ಗೆ ನಾಯಕ ಇಯಾನ್ ಮಾರ್ಗನ್ (43) ಹಾಗೂ ಜಾನಿ ಬೇರ್‌ಸ್ಟೊ (56) ತಾಳ್ಮೆಯ ಇನಿಂಗ್ಸ್ ಕಟ್ಟಿ 14 ಓವರ್‌ಗಳಲ್ಲಿ 84 ರನ್ ಕಲೆ ಹಾಕಿತು.
ಜೋಸ್ ಬಟ್ಲರ್ 11 ರನ್ ಕಲೆ ಹಾಕಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಏಳನೇ ವಿಕೆಟ್‌ಗೆ ಕ್ರೀಸ್ ವೋಕ್ಸ್ ಮತ್ತು ಬೆನ್ ಸ್ಟೋಕ್ಸ್ ಭರ್ಜರಿ ಜೊತೆಯಾಟ ಆಡಿದರು. ಈ ಜೋಡಿ 10.95ರ ಸರಾಸರಿಯಲ್ಲಿ 73 ರನ್ ಕಲೆ ಹಾಕಿದ ತಂಡದ ಮೊತ್ತವನ್ನುಹಿಗ್ಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಕ್ರಿಸ್ ವೋಕ್ಸ್ ಕೆಳ ಕ್ರಮಾಂಕದಲ್ಲಿ ಆರ್ಭಟ ನಡೆಸಿದರು. 19 ಎಸೆತಗಳಲ್ಲಿ ವೋಕ್ಸ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಸಿಡಿಸಿದರು.ಭಾರತದ ಪರ ಹಾರ್ದಿಕ್ ಪಾಂಡ್ಯ 3, ಜಡೇಜಾ 2 ವಿಕೆಟ್ ಕಬಳಿಸಿದರು.
ಇಂಗ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 321
ಭಾರತ 50 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 316

8 thoughts on “ಜಾದವ್ ಹೋರಾಟ ವ್ಯರ್ಥ: ವೈಟ್ ವಾಶ್ ನಿಂದ ಪಾರಾದ ಇಂಗ್ಲೆಂಡ್

 • October 18, 2017 at 12:32 PM
  Permalink

  My spouse and I stumbled over here coming from a different page and thought I might check things out. I like what I see so now i’m following you. Look forward to finding out about your web page repeatedly.|

 • October 18, 2017 at 2:19 PM
  Permalink

  Simply desire to say your article is as astounding. The clarity on your put up is simply excellent and i could assume you’re an expert in this subject. Well together with your permission allow me to clutch your feed to keep up to date with approaching post. Thanks a million and please carry on the rewarding work.|

 • October 20, 2017 at 10:47 PM
  Permalink

  Thank you for the good writeup. It in fact was a amusement account it. Look advanced to far added agreeable from you! By the way, how can we communicate?|

 • October 21, 2017 at 4:33 AM
  Permalink

  We’re a group of volunteers and opening a new scheme in our community.
  Your site provided us with valuable info to work on. You’ve done
  a formidable job and our entire community will be grateful to you.

Comments are closed.