ಬಿಜೆಪಿ ಆಡಳಿತವನ್ನೇ ಮುಂದುವರಿಸಿದ ಸರ್ಕಾರ!

ರಾಜ್ಯದಲ್ಲಿ ಬರ ಬಂದು ಜನರಿಗೆ ಕುಡಿಯಲು ನೀರಿಲ್ಲದಿದ್ದರೂ, ಬಿಜೆಪಿಯವರು ಐದು ವರ್ಷ ನಡೆಸಿದ ದುರಾಡಳಿತವನ್ನೇ ಈಗಿನ ಮುಖ್ಯ ಮಂತ್ರಿಯವರೂ ಮುಂದುವರೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ನೀರಿಗಾಗಿ ಕೆಲವೆಡೆ ಗುಳೆ ಹೋಗ್ತಿದ್ದಾರೆ. ಬರದಿಂದ ಬೆಳೆ ನಷ್ಟ ಅನುಭವಿಸಿದ್ದಾರೆ. ಜಲಾಶಯ ಭರ್ತಿಯಾಗದೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಸರ್ಕಾರ ಈ ಬಗ್ಗೆ ಗಾಂಭೀರ್ಯತೆಯಿಂದ ಸ್ಪಂಧಿಸುತ್ತಿಲ್ಲ ಎಂದು ತಿಳಿಸಿದರು.

ಬಿಜೆಪಿಯವರು ಕೇಂದ್ರದ ಅನುದಾನ ಸದ್ಬಳಕೆಯಾಗಿಲ್ಲ ಎಂದು ಹೇಳುತ್ತಾರೆ. ಮುಖ್ಯಮಂತ್ರಿಯವರು ಕೇಂದ್ರ ಕಡಿಮೆ ಹಣ ಬಿಡುಗಡೆ ಮಾಡಿದೆ ಎನ್ನುತ್ತಾರೆ. ಯಾವ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡುತ್ತೆ ಅನ್ನೋದು ಮುಖ್ಯವಲ್ಲ. ದುಂದು ವೆಚ್ಚ ಮಾಡವುದಕ್ಕೆ ಕಡಿವಾಣ ಹಾಕಬೇಕು. ಆಡಳಿತ ಸರ್ಕಾರದ ಜನಪ್ರತಿನಿಧಿಗಳು ಮೇವು ಹಂಚಿಕೆಯಲ್ಲೂ ಹಣ ಕೊಳ್ಳೆ ಹೊಡಿಯುತ್ತಿದ್ದಾರೆ. ಮುಖ್ಯಮಂತ್ರಿಯವರು ಜನರಿಗೆ ಹೇಳಿಕೆ ನೀಡುವುದರಿಂದ ಪ್ರಯೋಜನವಿಲ್ಲ. ತ್ವರಿತಗತಿಯಲ್ಲಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಎಲ್ಲಾ ವಿಷಯದಲ್ಲೂ ಕರ್ನಾಟಕವನ್ನ ಕಡೆಗಣಿಸುತ್ತಿದೆ. ಹೀಗಾಗಿ ಜನರು ಪ್ರಾದೇಶಿಕ ಪಕ್ಷದ ಮೂಲಕ ಕೇಂದ್ರದ ಮೇಲೆ ಒತ್ತಡ ತರಬಹುದು ಎನ್ನುವುದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ರಾಜ್ಯ ಸರ್ಕಾರ ಇನ್ನೂ ನಿದ್ರಾವಸ್ಥೆಯಲ್ಲಿದೆ. ಕಂಬಳದ ವಿಷ್ಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಬಿಜೆಪಿ ಆಂತರಿಕ ಕಲಹ, ಕಾಂಗ್ರೆಸ್ ನಡವಳಿಕೆ ಲಾಭ ಪಡೆಯೋ ಸಣ್ಣ ಮನಸ್ಸಿನ ವ್ಯಕ್ತಿ ನಾನಲ್ಲ. ನಮ್ಮ ಜನರ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನಪಡಿ. ನಿಮ್ಮ ಆಂತರಿಕ ಕಚ್ಚಾಟ ಏನೇ ಇರಲಿ. ನಿಮಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಇದು ಹೀಗೇ ಮುಂದುವರೆದರೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಭುಗಿಲೆದ್ದ ಭಿನ್ನಮತ: ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಎದುರೇ ಕೆಲ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದ ಟಿಕಟ್ ಹರೀಶ್ ಗೌಡಗೆ ನೀಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಇದರಿಂದ ಎಚ್ ಡಿಕೆ ಕೆಂಡಾಮಂಡಲರಾದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು ಸುಮ್ಮನಿರಿಸಿದರು. ಇತ್ತೀಚೆಗೆ ಮಾಜಿ ಕುಲಪತಿ ರಂಗಪ್ಪನವರಿಗೆ ಟಿಕೆಟ್ ನೀಡುತ್ತಾರೆ ಎಂಬ ಮಾತು ಕೇಳಿಬಂದಿತ್ತು.

7 thoughts on “ಬಿಜೆಪಿ ಆಡಳಿತವನ್ನೇ ಮುಂದುವರಿಸಿದ ಸರ್ಕಾರ!

 • October 18, 2017 at 1:28 PM
  Permalink

  Hello, after reading this awesome article i am also delighted to share my knowledge here with friends.|

 • October 18, 2017 at 1:57 PM
  Permalink

  It’s truly very difficult in this busy life to listen news on Television, thus I only use internet for that reason, and take the most up-to-date information.|

 • October 18, 2017 at 3:11 PM
  Permalink

  I am sure this paragraph has touched all the internet visitors, its really really fastidious article on building up new blog.|

 • October 20, 2017 at 9:30 PM
  Permalink

  Heya i’m for the first time here. I found this
  board and I to find It truly useful & it helped me out a lot.
  I’m hoping to give something back and aid others such as you aided me.

 • October 20, 2017 at 9:30 PM
  Permalink

  I seriously love your site.. Excellent colors & theme. Did you create this web site yourself? Please reply back as I’m trying to create my own personal site and want to find out where you got this from or what the theme is called. Cheers!|

 • October 21, 2017 at 12:42 AM
  Permalink

  Do you have a spam issue on this blog; I also am a blogger, and I was wanting to know your situation; many of us have
  developed some nice methods and we are looking to exchange strategies with others, be sure to shoot me an email if interested.

 • October 21, 2017 at 12:44 AM
  Permalink

  This design is wicked! You definitely know how to keep a reader
  entertained. Between your wit and your videos, I was almost
  moved to start my own blog (well, almost…HaHa!) Excellent job.

  I really loved what you had to say, and more than that, how you presented it.
  Too cool!

Comments are closed.