ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ: ಮುಂದುವರಿದ ಪ್ರತಿಭಟನೆ

ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಆಗ್ರಹಿಸಿ ಕಳೆದೊಂದು ವಾರದಿಂದ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಹೊರತಾಗಿಯೂ  ಪ್ರತಿಭಟನಾಕಾರರು ಶಾಶ್ವತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಇನ್ನೂ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಅವರು ಅಲಂಗನಲ್ಲೂರ್ ಜಿಲ್ಲೆಯಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಿದರು. ನಂತರ  ಪನ್ನೀರ್‌ ಸೆಲ್ವಂ ಸಂಪುಟ ಸಚಿವರು ಕೂಡ ತಮ್ಮ ಕ್ಷೇತ್ರಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಗೆ  ಚಾಲನೆ ನೀಡಿದರು ಎನ್ನಲಾಗಿದೆ.

ಇನ್ನೂ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ತಮಿಳು ಸಂಘಟನೆಗಳ ಪ್ರತಿಭಟನೆ ಮುಂದುವರೆಸಲಾಗುತ್ತಿದ್ದು, ತಮಿಳುನಾಡು ಸಿಎಂ ಒ ಪನ್ನೀರ್ ಸೆಲ್ವಂ ಅವರ ಮನವಿಯನ್ನು ತಳ್ಳಿ ಹಾಕಿರುವ  ಪ್ರತಿಭಟನಾಕಾರರು ಜಲ್ಲಿಕಟ್ಟು ಕುರಿತಂತೆ ಶಾಶ್ವತ ಕಾನೂನು ರೂಪಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇನ್ನು, ಸಿಎಂ ಪನ್ನೀರ್‌ ಸೆಲ್ವಂ ‘ಒಂದೇ ದಿನದಲ್ಲಿ ಮಧ್ಯಪ್ರವೇಶಿಸಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ’ಕ್ಕೆ ಧನ್ಯವಾದ ಹೇಳಿದ್ದಾರೆ. ಈ ಕುರಿತಂತೆ ಪನ್ನೀರ್‌ ಸೆಲ್ವಂ ಪ್ರಧಾನಿ ಮೋದಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. ಇದರ ಮಧ್ಯೆ ಸುಗ್ರೀವಾಜ್ಞೆ ಕುರಿತ ಕಡತಗಳನ್ನು ಸುಪ್ರೀಂಕೋರ್ಟ್‌‌ಗೆ ತಮಿಳುನಾಡು ಸರ್ಕಾರ ಸಲ್ಲಿಸಿದೆ ಎಂಬ ಮಾಹಿತಿ ದೊರೆತಿದೆ.

4 thoughts on “ಜಲ್ಲಿಕಟ್ಟು ಸ್ಪರ್ಧೆಗೆ ಚಾಲನೆ: ಮುಂದುವರಿದ ಪ್ರತಿಭಟನೆ

  • October 24, 2017 at 11:17 AM
    Permalink

    I have recently started a site, the information you provide on this site has helped me tremendously. Thanks for all of your time & work.

  • October 24, 2017 at 11:45 AM
    Permalink

    Someone essentially assist to make critically articles I might state. This is the first time I frequented your website page and up to now? I surprised with the analysis you made to make this particular put up amazing. Excellent job!

Comments are closed.

Social Media Auto Publish Powered By : XYZScripts.com