ನಾಲ್ಕು ಕಾಲುಗಳುಳ್ಳ ವಿಚಿತ್ರ ಗಂಡು ಮಗು ಜನನ!

ನಾಲ್ಕು ಕಾಲಿನ ಮಗುವೊಂದು ಜನಿಸಿ ಅಚ್ಚರಿ ಮೂಡಿಸಿರೋ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದಢೇಸೂಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಪುಲದಿನ್ನಿ ಗ್ರಾಮದ ಲಲಿತಾ ಅವರಿಗೆ ಜನಿಸಿದ ಗಂಟು ಮಗುವಿಗೆ ನಾಲ್ಕು ಕಾಲುಗಳಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಲಲಿತಾ ಮತ್ತು ಚನ್ನಬಸವ ದಂಪತಿಯ  ಎರಡನೇ ಮಗು ಇದಾಗಿದ್ದು,  ಕಳೆದ ರಾತ್ರಿ ದಡೇಸ್ಗೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಪರಿಶ್ರಮದಿಂದ ಸಾಮಾನ್ಯ ಹೆರಿಗೆಯಲ್ಲಿ ಈ ಮಗು ಜನಿಸಿದೆ. ಬಹು ಅಪರೂಪವಾದ ನಾಲ್ಕು ಕಾಲುಗಳುಳ್ಳ ಗಂಡು ಮಗು ಜನಿಸಿದ್ದು ಆರೋಗ್ಯವಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯಕೀಯ ಭಾಷೆಯಲ್ಲಿ  ಇದನ್ನು ಕಂಜೆನಿಟಲ್ ಡೆಫಾರ್ ಮೈಟಿಸ್    (Congenital deformities) ಎಂದು ಕರೆಯಲ್ಪಡುವ ಈತೆರನಾದ ಮಗುವಿಗೆ ನಾಲ್ಕು ಕಾಲುಗಳಿವೆ. ಸದ್ಯ ಮಗು ಹಾಗೂ ತಾಯಿ ಆರೋಗ್ಯವಾಗಿದ್ದು ಮಗುವಿನ ಜೀವಕ್ಕೆ ಅಪಾಯವಿಲ್ಲ. ಶಸ್ತ್ರ ಚಿಕಿತ್ಸೆ ಮೂಲಕ ಈ ವೈಕಲ್ಯ ಸರಿಪಡಿಸಬಹುದು ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ವಿರುಪಾಕ್ಷಿ ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com