ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯಗೆ ಮದುವೆ ಫಿಕ್ಸ್.!

ಕನ್ನಡ ಚಲನ ಚಿತ್ರಗಳ ನಾಯಕಿ ನಟಿ, ರೂಪದರ್ಶಿ, ಹಾಗೂ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯನವರಿಗೆ ಮದುವೆ ಫಿಕ್ಸ್ ಆಗಿದೆ. ಲವ್ ಕಂ ಅರೇಂಜ್ ಮ್ಯಾರೇಜ್ ಆಗುತ್ತಿರೋ ಇವರು ಫೆಬ್ರುವರಿಯಲ್ಲಿ ಹಸೆಮಣೆ ಏರಲಿದ್ದಾರೆ.

ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ನಟಿಸಿರೋ ಈ ಬೆಡಗಿಯನ್ನು ಲವೇಶ್ ಎಂಬ ಯುವಕ ಕೈ ಹಿಡಿಯಲಿದ್ದಾನೆ. ಈಗಾಗಲೇ ಲವೇಶ್ ಜೊತೆ ಸಪ್ತಪದಿ ತುಳಿಯಲು ಫೆಬ್ರವರಿ ತಿಂಗಳಲ್ಲಿ ದಿನವೂ ನಿಶ್ಚಯವಾಗಿದೆ ಎಂದು ತಿಳಿದು ಬಂದಿದೆ. 29ರ ಹರೆಯದ ನಿಧಿ ಸುಬ್ಬಯ್ಯ ಅಭಿಮಾನಿ, ಚಂಕಾಯ್ಸಿ ಚಿಂದಿ ಉಡಾಯ್ಸಿ, ಪಂಚರಂಗಿ ಸೇರಿದಂತೆ ಹತ್ತಾರು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈ ನಟಿ ಸಪ್ತಪದಿ ತುಳಿಯಲು ಸಿದ್ಧತೆ ನಡೆಸಿದ್ದಾರೆ. ಇವರ ಮದುವೆಗೆ ಇವರ ಪೋಷಕರು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಪೋಷಕರಿಗೆ ಏಕೈಕ ಪುತ್ರಿಯಾಗಿರುವ ನಿಧಿ ಸುಬ್ಬಯ್ಯ ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ಗಮನ ಸೆಳೆದಿದ್ದರು. ಇವರು ಮಾಡಲಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಫೇರ್ ಎಂಡ್ ಲವ್ಲಿ ಸೇರಿದಂತೆ ಹಲವಾರು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

One thought on “ಪಂಚರಂಗಿ ಬೆಡಗಿ ನಿಧಿ ಸುಬ್ಬಯ್ಯಗೆ ಮದುವೆ ಫಿಕ್ಸ್.!

 • October 24, 2017 at 2:53 PM
  Permalink

  Superb blog! Do you have any helpful hints for aspiring writers?

  I’m planning to start my own website soon but I’m a little lost on everything.

  Would you advise starting with a free platform like WordPress or go for a paid option? There are
  so many choices out there that I’m totally overwhelmed ..
  Any suggestions? Appreciate it!

Comments are closed.