ಕಂಬಳಕ್ಕಾಗಿ ಕನ್ನಡಿಗರೆಲ್ಲಾ ಒಂದಾಗಿ: ಜಗ್ಗೇಶ್

ಉತ್ತರ ದಕ್ಷಿಣ ಹಳೆ ಮೈಸೂರು ಅನ್ನದೆ ಅಖಂಡ ಕರ್ನಾಟಕ ಒಂದಾದಿ. ಒಗ್ಗಟ್ಟಿನ ಕೊರತೆಯನ್ನು ಈಗಲಾದರೂ ಒಡೆದೋಡಿಸಿ, ನಾವೆಲ್ಲರೂ ಒಟ್ಟಾಗಿ ಕೂಗಿದರೆ ವಿಶ್ವಕ್ಕೆ ಕೇಳಿಸುವುದು ಕನ್ನಡಿಗನ ದ್ವನಿ ಎಂದು ನವರಸ ನಾಯಕ ಜಗ್ಗೇಶ್ ಟ್ವಿಟ್ ಮೂಲಕ ಕನ್ನಡಿಗರನ್ನು ಎಚ್ಚರಿಸಿದ್ದಾರೆ.

ಇತ್ತೀಚೆಗೆ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸದಂತೆ ಸುಪ್ರಿಂಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ತಮಿಳುನಾಡಿನ ಜನರೆಲ್ಲರೂ ಬಗ್ಗಟ್ಟಾಗಿ ಹೋರಾಟ ಮಾಡಿದ್ದರ ಫಲವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಷೆ ಹೊರಡಿಸಿದೆ. ಇದಕ್ಕಾಗಿ ನಟ ಜಗ್ಗೇಶ್ ಕನ್ನಡದ ಸನಾತನ ಕ್ರೀಡೆಯಾದ ಕಂಬಳದ ಪರವಾಗಿ ದನಿ ಎತ್ತಿ ಕನ್ನಡಿಗರೆಲ್ಲಾ ಒಂದಾಗಿ ನಿಷೇಧವಾಗಿರುವ ಕಂಬಳ ಕ್ರೀಡೆಯ ಪರ ಮತ್ತೆ ಹೋರಾಟ ನಡೆಸೋಣ ಎಂದಿದ್ದಾರೆ.
ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಈಗಲಾದರೂ ಒಂದಾಗಿ. ಕನ್ನಡಿಗರು ಯಾವುದರಲ್ಲೂ ಕೊರತೆ ಇಲ್ಲ. ನ್ಯಾಯಕ್ಕಾಗಿ ಎಲ್ಲರೂ ಹೋರಾಟ ನಡೆಸಲು ಶುರುವಾಗಲಿ ಒಗ್ಗಟ್ಟಿನ ಮಂತ್ರ ಎಂದಿದ್ದಾರೆ. ಈ ಮೂಲಕವೇ ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ ಎಂದು ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರು ಒಪ್ಪುತ್ತಾರೋ, ಬಿಡುತ್ತಾರೋ ನಾನು ದಕ್ಷಿಣ ಕನ್ನಡದ ಸನಾತನ ಗ್ರಾಮೀಣ ಕ್ರೀಡೆ ನಮ್ಮ ಕಂಬಳವನ್ನು ಬೇಕು ಎಂದು ಕೂಗುತ್ತೇನೆ. ನಮ್ಮ ಹಕ್ಕು, ನಮ್ಮ ಪದ್ಧತಿ, ನಿಲ್ಲಿಸಲು ಯಾರಿಗೂ ಹಕ್ಕು ಇಲ್ಲ ಎಂದು ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.