ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ: ಅಂಧರ ಟಿ20 ವಿಶ್ವಕಪ್ ಫೈನಲ್

ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ (ಸಿಎಬಿಐ) ಜನವರಿ 29 ರಿಂದ ಆಯೋಜಿಸಿರುವ ಅಂಧರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫೆಬ್ರವರಿ 12 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.
ಇನ್ನೂ ಈ ಒಂದು ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನೇಪಾಳ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭಾಗವಹಿಸಲಿವೆ.
ಸೆಮಿಫೈನಲ್ ಪಂದ್ಯಗಳು ಫೆಬ್ರವರಿ 11 ರಂದು ನಡೆಯಲಿದ್ದು ಲೀಗ್ ಪಂದ್ಯಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯಲಿವೆ ಎಂಬ ಮಾಹಿತಿ ದೊರೆತಿದೆ.
ಇನ್ನೂ ಟೂರ್ನಮೆಂಟ್‌ನ ಒಟ್ಟು ಬಜೆಟ್ ಎಂಟು ಕೋಟಿ ರೂಪಾಯಿಗಳಾಗಿದ್ದು, ನಮಗೆ ಇನ್ನೂ ಶೇ.40 ರಷ್ಟು ಹಣಕಾಸಿನ ಕೊರತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲ ಕಂಪನಿಗಳು ಕೂಡ ಅಂಧರ ಕ್ರಿಕೆಟ್‌ಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರೂ ಕ್ರಿಕೆಟ್ ಅವರ ಸಿಎಸ್‌ಆರ್ ಚಟುವಟಿಕೆಗಳ ಅಡಿಯಲ್ಲಿ ಬರದೇ ಇರುವುದರಿಂದ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಸಿಎಬಿಐನ ಅಧ್ಯಕ್ಷ ಶ್ರೀ ಮಹಾಂತೇಶ್ ಜಿ.ಕೆ. ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com